Blog

ಆ-ದಂ

04/03/2012 13:45

 

ಆ-ದಂ

ಎಳೆದು ಒಂದು ದಂ

ಆದಂ

ಇಂತೆಂದಂ:

'ಈವ್ ನೀನು ದಂ:

ನಾನು ಪತಿ, 

ನಾವೇ ಮೊದಲ

ದಂಪತಿ'

 

 'ಸರಿ ಓ.ಕೆ.

ನಾನೇ ನಿನ್ನಾಕೆ

ಆದರೆ ದಂ

 ಬಿಡು

ಪಣ

ತೊಡು

ಸಿಗರೇಟು

ಏನ್ ನಿನ್ನ ಆನ್ಸರ್?

ಮರು ಮಾತಾಡದೆ ಆದಂ

'ದಂ'

ಬಿಟ್ಟಂ

ಸಿಗಾರ

ಬಾಯಿಗಿಟ್ಟಂ

ತತ್ಪಲಂ

'ಆದಂ'

ಏಕಾಂಗಿ ಆದಂ

........................ 'YNK' 

 

ಕನ್ನಡ ಪತ್ರಿಕಾರಂಗದಲ್ಲಿ ವೈಯೆನ್ಕೆ

29/02/2012 08:50

 

ಕನ್ನಡ ಪತ್ರಿಕೋದ್ಯಮದ ಬಹುಮುಖ್ಯ ಬರಹಗಾರರಲ್ಲಿ ವೈಯೆನ್ಕೆ ಪ್ರಮುಖರು. ವೈಯೆನ್ಕೆ ಪತಿಕೋಧ್ಯಮದ ಹಲವು ಸ್ಥರಗಳಲ್ಲಿ ಕಾರ್ಯನಿರ್ವಹಿಸಿದವರು.  ಅವರ ವೃತ್ತಿ ಬದುಕಿನ ಹಾದಿ ವಿಶಾಲವಾದುದ್ದು.  ಆಸಕ್ತಿಯ ವಿಷಯಗಳು ಹಲವು ಅಂತೆಯೇ ಅವರು ಯಾವುದೇ ವಿಚಾರದ ಬಗೆಗೆ ಚರ್ಚಿಸುವಂತೆ ಪರಿಪೂu ಜ್ಞಾನವನ್ನು ಪಡೆದಿದ್ದರು.
’ಬಹಳಷ್ಟು ಬರೆಯುವವರಲ್ಲಿ ವೈಯೆನ್ಕೆ ಒಬ್ಬರು.  ಅವರು ಬರೆಯುತ್ತಾರೆ. ಎಷ್ಟು ಬರೆದರೂ ಅವರು, ಬರೆಯುವುದು ಇದ್ದೇ ಇರುತ್ತದೆ.  ಬಹು ವ್ಯಾಪಕವಾದ ಓದಿನಿಂದ ಅವರು ತಮ್ಮ ಮನಸ್ಸನ್ನು ಶ್ರೀಮಂತಗೊಳಿಸಿಕೊಂಡಿದ್ದಾರೆ’ ಎಂದು ಖ್ಯಾತ ಪತ್ರಕರ್ತ ಪಾಟೀಲ ಪುಟ್ಟಪ್ಪ ವೈಯೆನ್ಕೆ ಸಂಪಾದಿಸಿದ ಜ್ಞಾನದ ಕುರಿತು ಹೇಳಿದ್ದಾರೆ (ಭಟ್,೧೯೯೯)
ವೈಯೆನ್ಕೆಯವರು ೧೯೨೬ ರಂದು ಬೆಂಗಳೂರಿನಲ್ಲಿ ಜನಿಸಿದರು.  ಇವರ ಪೂರ್ಣ ಹೆಸರು ಯಳಂದೂರು ಕೃಷ್ಣಮೂರ್ತಿ ಮುಂದೆ ಕನ್ನಡ ಪತ್ರಿಕೋದ್ಯಮ ಜಗತ್ತಿನಲ್ಲಿ ’ವೈಯೆನ್ಕೆ’ ಎಂದೇ  ಚಿರಪರಿಚಿತರಾದರು.
ವೈಯೆನ್ಕೆ ತಮ್ಮ ಬಿಇಸ್ಸಿ ಪದವಿಯನ್ನು ಬೆಂಗಳೂರು ಸೆಂಟ್ರಲ್ ಕಾಲೇಜಿನಲ್ಲಿ ಪಡೆದರು.  ಆದರೆ ಅವರ ಆಸಕ್ತಿಯ ಕ್ಷೇತ್ರಗಳು ಸಾಹಿತ್ಯ ಮತ್ತು ಪತ್ರಿಕೋದ್ಯಮಗಳಾಗಿದ್ದವು.  ಅವರ ವಿದ್ಯಾರ್ಥಿ ದೆಶೆಯಲ್ಲಿ ಇರುವಾಗಲೇ ದೇಶಬಂಧು ಮತ್ತು ಛಾಯಾ ಪತ್ರಿಕೆಗೆ ನಿಯಮಿತವಾಗಿ ಸಾಹಿತ್ಯ, ಸಮಕಾಲಿನ ವಿಷಯಗಳ ಬಗ್ಗೆ ಬರೆಯುವುದನ್ನು ಆರಂಭಿಸಿದರು.
ನಂತರ ವೈಯೆನ್ಕೆ ದೇಶಬಂಧು ಪತ್ರಿಕೆಯಲ್ಲಿ ತಮ್ಮ ವೃತ್ತಿ ಜೀವನ ಆರಂಭಿಸಿದರು.  ಮುಂದೆ ವೈಯೆನ್ಕೆ ವೃತ್ತಿ ಮತ್ತು ಪ್ರವೃತ್ತಿಯಾಗಿ ಬರಹವನ್ನು ಸ್ವೀಕರಿಸಿದರು.
ವೈಯೆನ್ಕೆ ೧೯೪೯ ರಲ್ಲಿ ಪ್ರಜಾವಾಣಿ ಬಳಗಕ್ಕೆ ಸೇರಿಕೊಂಡು ಹಂತ ಹಂತವಾಗಿ ವರದಿಗಾರ, ಉಪಸಂಪಾದಕ, ಸಂಪಾದಕರಾಗಿ ಕಾರ್ಯನಿರ್ವಹಿಸಿದರು. ಅವರು ಸಂಪಾದಕರಾಗಿದ್ದಾಗ ಪ್ರಾರಂಭಿಸಿದ ಮೂರನೇ ಸಂಪಾದಕೀಯ ಲೇಖನ ಬಹಳ ಜನಪ್ರಿಯವಾಯಿತು. ವೈಯೆನ್ಕೆ ಪ್ರಜಾವಾಣಿ ಪತ್ರಿಕೆಯಲ್ಲಿ ಅನೇಕ ಹೊಸ ಮಾದರಿಯ ಬೆಳವಣಿಗೆಗೆ ಕಾರಣೀಕರ್ತರಾದರು.  ಕನ್ನಡ ಸಾಹಿತ್ಯದ ಬದಲಾವಣೆಯ ಕಾಲದಲ್ಲಿ, ನವ್ಯದ ಛಾಯೆ ಪ್ರಾರಂಭವಾದಾಗ ಅದಕ್ಕೆ ಪ್ರಜಾವಾಣಿ ಪತ್ರಿಕೆಯನ್ನು ವೇದಿಕೆ ಮಾಡಿಕೊಟ್ಟ ಕೀರ್ತಿ ವೈಯೆನ್ಕೆ ಅವರಿಗೆ ಸಲ್ಲುತ್ತದೆ. 
ಅಂತೆಯೇ, ಅಡಿಗ, ಗಿರೀಶ್ ಕಾರ್ನಾಡ್, ಗಿರಡ್ಡಿ ಗೋವಿಂದ ರಾಜು, ಚಂದ್ರಶೇಕರ ಕಂಬಾರ,ಎ ಕೆ ರಾಮಾನುಜನ್ ಮುಂತಾದವರ ಬರಹಗಳಿಗೆ ಅವಕಾಶ ಕಲ್ಪಸಿ ಪತ್ರಿಕೆಯಲ್ಲಿ ಸಾಹಿತ್ಯಮಯವಾಗಿ ರೂಪುಗೊಳ್ಳುವಂತೆ ಮಾಡಿದರು. ಹೊಸ ಪೀಳಿಗೆಯ ಬರಹಗಾರರಿಗೆ ಮಾರ್ಗದರ್ಶಿಯಾದರು.
೧೯೬೯ ರಲ್ಲಿ ಅವರು ಥಾಮ್ಸನ್ ಪೌಂಡೇಷನ್ ಸ್ಕಾಲರ್‌ಶಿಪ್ ಪಡೆದು ವೆಲ್ಸಾನ ಕಾರ‍್ಡಫ್‌ನಲ್ಲಿ ಮೂರು ತಿಂಗಳು ಪತ್ರಿಕೋಧ್ಯಮಕ್ಕೆ ಸಂಬಂಧಿಸಿದಂತೆ ಉನ್ನತ ವ್ಯಾಸಂಗ ಮುಗಿಸಿ ಬಂದರು. ೧೯೭೯ ರಲ್ಲಿ ಪೋಲೆಂಡ್. ಜೆಕೋಸ್ಲೋವಾಕಿಯಾ, ಹಾಗೂ ಹಂಗೇರಿ ದೇಶಗಳಿಗೆ ಆಮಂತ್ರಣದ ಮೇರೆಗೆ ಭೇಟಿ ಕೊಟ್ಟರು.
ಪ್ರಜಾವಾಣಿಯ ಸಂಪಾದಕರಾಗಿ ನಿವೃತ್ತಿಯಾದ ವೈಯೆನ್ಕೆ ಮುಂದೆ ಅದರ ಸಂಪಾದಕರು, ಸಲಹೆಗಾರರಾಗಿ ಕೆಲವು ವರ್ಷ ಮುಂದುವರೆದರು. ಅನಂತರ ಅವರು ಉದಯ ವಾಣಿಯಲ್ಲಿ ’ತೀರ್ಥರೂಪ’ ಮತ್ತು ’ವಂಡರಕಣ್ಣು, ಅಂಕಣಗಳನ್ನು ಬರೆಯಲು ಆರಂಭಿಸಿದರು.  ಬಹಳ ಬೇಗನೆ ಈ ಎರಡು ಅಂಕಣಗಳು ಜನಪ್ರಿಯತೆಯನ್ನು ಪಡೆದುಕೊಂಡವು. 
ನಂತರ ಅವರು ’ಕನ್ನಡಪ್ರಭ’ ಪತ್ರಿಕೆಯ ಸಂಪಾದಕರಾಗಿ ಸೇರಿಕೊಂಡರು.  ಪತ್ರಿಕೆಗೆ ಒಂದು ಸಾಮರ್ಥ ರೂಪವನ್ನು ಕೊಡುವಲ್ಲಿ ಯಶಸ್ವಿಯಾದರು. ಅವರ ’ವಂಡರ್‌ಕಣ್ಣು’ ಅಂಕಣ ಪ್ರತಿ ಗುರುವಾರ ಪ್ರಕಟವಾಗುತ್ತಿತ್ತು.  ಅದು ತನ್ನದೇ ಬಹುದೊಡ್ಡ  ಓದುಗ ವರ್ಗವನ್ನು ಹೊಂದಿತ್ತು.
ವೈಯೆನ್ಕೆ ಕನ್ನಡಪ್ರಭ ಪತ್ರಿಕೆ ಸೇರಿಕೊಂಡ ಮೊದಲಿಗೆ ಪತ್ರಿಕೆಯು ತೀರಾ ಸಂಕಷ್ಟದ ಸ್ಥಿತಿಯೇ ಇತ್ತು. ಪ್ರಸಾರ ಸಂಖ್ಯೆಯು ಗಣನೀಯವಾಗಿ ಕುಸಿದಿತ್ತು. ವೈಯೆನ್ಕೆ ಪತ್ರಿಕೆಗೆ ಹೊಸ ರೂಪವನ್ನು ಕೊಡುವ ಕಾರ್ಯದಲ್ಲಿ ತೊಡಗಿದರು. ಪತ್ರಿಕೆಯನ್ನು ಸಾಹಿತ್ಯ, ಸಾಂಸ್ಕೃತಿಕ, ಸಾಮಾಜಿಕ ಪಾತಳಿಕ ವೇದಿಕೆಯನ್ನಾಗಿ ಮಾಡಿದರು. 
೧೯೮೯ ರಿಂದ ತಮ್ಮ ಜೀವಿತದ ಕೊನೆಯ ದಿನಗಳವರೆಗೆ ಕನ್ನಡ ಪ್ರಭ ಪತ್ರಿಕೆಯ ಸಂಪಾದಕರಾಗಿ ಕಾರ್ಯ ನಿರ್ವಹಿಸಿದರು (೧೯೯೯ ಅಕ್ಟೋಬರ್ ೧೦).
ಪತ್ರಿಕೋದ್ಯಮದಲ್ಲಿ ಅವರ ಬರಹಗಳು ಕಡಿಮೆ; ಆದರೆ, ಬರೆದಷ್ಟು ಬರಹಗಳು ಮಹತ್ವ ಪೂರ್ಣವಾದವು. ’ಇದು ಸುದ್ದಿ, ಇದು ಸುದ್ದಿಯಲ’, ’ವಂಡರ್‌ಕಣ್ಣು,’ ಹೀಗೆ ಅನೇಕ ಮಹತ್ವ ಪೂರ್ಣ ಕೃತಿಗಳನ್ನು ರಚಿಸಿದ್ದಾರೆ. ಇವುಗಳು ಬಹುತೇಕ ಕೃತಿಗಳು ಅಂಕಣ ಬರಹಗಳ ಸಂಗ್ರಹವಾಗಿವೆ.

ಪದ್ಯ ಇಷ್ಟು ಲೈಟಾದ್ರೆ ಹೇಗೆ ಸ್ವಾಮಿ?

20/02/2012 10:03

 

೧೯೪೦ ರ ದಶಕದಲ್ಲಿ ನವ್ಯ ಕಾವ್ಯದ ಮನ್ವಂತರ ಕಾಲಘಟ್ಟದಲ್ಲಿ ಅದಕ್ಕೆ ಸೂಕ್ತ ರೀತಿಯ ವೇದಿಕೆಯನ್ನು ಕಲ್ಪಸಿಕೊಟ್ಟವರು ವೈಯೆನ್ಕೆ. ಅವರ ಸಾವಿ ತ್ಯಿಕ ಬರಹಗಳು ಕಡಿಮೆ ಇರಬಹುದು.  ಆದರೆ ಅವರು ಅನೇಕ ಬರಹಗಾರರಿಗೆ ಅವಕಾಶ ಕಲ್ಪಿಸಿಕೊಟ್ಟರು. ಅವರ ಕವಿ ತೆಗಳೂ ಕೂಡ ವಿ ಂದೆ ಇದ್ದ ಸಂಪ್ರದಾಯವನ್ನು ದಿಕ್ಕರಿಸಿ ಹೊಸತನವನ್ನು ಕೊಟ್ಟಂತವು.
ಕತೆಗಾರ ಆನಂದ್ ಋಗ್ವೇದಿ ವೈಯೆನ್ಕೆಯವರನ್ನು ನವ್ಯ ಸಾವಿ ತ್ಯದ ಭಿತ್ತಿಯಲ್ಲಿ ನೋಡಬೇಕು. ಕನ್ನಡದ ಸಂದರ್ಭದಲಿ 'ಪಶ್ಚಿಮವಾಯನಿಯೇ ಆಗಿದ್ದ ನವ್ಯ, ಆ ಸಮಯದಲ್ಲಿ ಇಂಗ್ಲೀಷ್ ಮೂಲಕ ಜಾಗತಿಕ ಸಾವಿ ತ್ಯಕ್ಕೆ ತೆರೆದುಕೊಂಡ ಮನಸ್ಸುಗಳು, ಅಷ್ಟೆಲ್ಲಾ ಓದಿನಿಂದ ಬಂದ ತಿಳಿವು ಅಥವಾ ಆ ಗ್ರವಿ ಕೆಯನ್ನು ಕನ್ನಡದ ಜಾಯಮಾನಕ್ಕೆ ಬಣ್ಣಿಸಿದ ಪರಿ ಅಭೂತಪೂರ್ವವಾದುದ್ದುವಿ  ಎಂದು ಹೇಳುತ್ತಾ ಮುಂದುವರೆದು ಅವರು 'ನವ್ಯ ಸಾವಿ ತ್ಯ ಕನ್ನಡಕ್ಕೆ ಬಹುಬೇಗನೆ ಬಂದಿದ್ದು, ಅಂದರೆ ೧೯ನೇ ಶತಮಾನದ ಕೈಗಾರಿಕೆ ಕ್ರಾಂತಿಯುಂಟಾದಾಗ ಪಾಶ್ಚಿಮಾತ್ಯ ರಾಷ್ಟ್ರಗಳಲ್ಲಿ (ಇಂಗ್ಲೆಂಡ್) ನವ್ಯ ಸಾವಿ ತ್ಯ ಹುಟ್ಟಿತ್ತು. ಆದರೆ ನಮ್ಮ ದೇಶದಲ್ಲಿ ಅಂತಹ ವಾತಾವರಣ ಸ್ಟೃಯಾಗಿರಲಿಲ್ಲ. ನಾವು ನವ್ಯ ಸಾವಿ ತ್ಯವನ್ನು ಬರಮಾಡಿಕೊಂಡೆವು. ವೈಯೆನ್ಕೆ ಪ್ರಜಾವಾಣಿ ಪತ್ರಿಕೆಯನ್ನು ವೇದಿಕೆಯಾಗಿ ಕಲ್ಪಿಸಿದರುವಿ  ಎಂದು ವಿ ಮರ್ಶಾತ್ಮಕ ದ್ಟೃಕೋನದಿಂದ ನೋಡುತ್ತಾರೆ. 
ಖ್ಯಾತ ಸಾವಿ ತಿ ನಾ.ಡಿಸೋಜಾ ಹೇಳುವಂತೆ ವಿ ನವ್ಯ ಸಾವಿ ತ್ಯಕ್ಕೆ ಉತ್ತಮ ವೇದಿಕೆಯನ್ನು ಕಲ್ಪಿಸಿಕೊಟ್ಟವರು ವೈಯೆನ್ಕೆ. ಅವರು ಅನೇಕ ಜನ ಪ್ರಸಿದ್ದ ಸಾವಿ ತಿ ಕವಿ ಗಳಾದ ಅಡಿಗ, ಅನಂತಮೂರ್ತಿ.ವಿ .ಕೆ. ರಾಮಾನುಜನ್‌ರಂತಹವರಿಗೆ ಅವಕಾಶವನ್ನು ಕಲ್ಪಿಸಿಕೊಟ್ಟರು. ಕತೆಗಾರ ಸದಾಶಿವ ಅವರಿಂದ ವಿ ಡಿದು ಬರಹಗಾರ ಪತ್ರಕರ್ತ ಜೋಗಿಯವರೆಗೆ ಅನೇಕ ಜನರನ್ನು ಪ್ರವರ್ಧಮಾನಕ್ಕೆ ತಂದವರು ವೈಯೆನ್ಕೆ. ಪ್ರಜಾವಾಣಿ ಪತ್ರಿಕೆಯು ನವ್ಯದ ವೇದಿಕೆಯನ್ನಾಗಿ ಮಾಡಿದರು. ಅವತ್ತು ಶುರುವಾದ ಪ್ರಜಾವಾಣಿಯ ಪರಂಪರೆಯು ಇಂದಿಗೂ ಕೂಡ ಮುಂದುವರಿದುಕೊಂಡು ಬರುತ್ತಿದೆ.
ವೈಯೆನ್ಕೆಯವರ ಸಾಹಿತ್ಯಕ ಬರಹದ ವಿಶೇಷತೆ ಎಂದರೆ ಬೇರೆ ಕವಿ ಗಳ ಬರಹಗಳಿಗಿಂತ ಭಿನ್ನವಾದ ನೆಲೆಗಟ್ಟಿನಲ್ಲಿ ಬರೆಯುತ್ತಿದ್ದರು. ಅವು ಕನ್ನಡ ಸಾವಿ ತ್ಯಕ್ಕೆ ಹೊಸತನವನ್ನು ತಂದುಕೊಟ್ಟವುವಿ  ಎಂದು ವೈಯೆನ್ಕೆಯ ಸಾವಿ ತ್ಯಿಕ ಪ್ರತಿಭೆಯನ್ನು ಗುರುತಿಸುತ್ತಾರೆ.
ಪ್ರೊ. ಕೇಶವಶರ್ಮ ಅವರು ಹೇಳುವಂತೆ ವಿ ...ವೈಯೆನ್ಕೆ ಅವರ ಸಾವಿ ತ್ಯಿಕ ಬರಹಗಳ ಕೂಡ ತೀಕ್ಷಣವಾದ ಭಾಷೆಯನ್ನು ಹೊಂದಿರುತ್ತಿದ್ದವು.ಬಹುತೇಕವಾಗಿ ಪ್ರಚಲಿತ ವಿ ಷಯಗಳ ಕುರಿತು ಸ್ಟೃಯಾಗಿರುತ್ತಿದ್ದವುವಿ  ಎಂದು ಸರಳವಾಗಿ ವೈಯೆನ್ಕೆಯವರ ಸಾವಿ ತ್ಯಿಕ ಕೊಡುಗೆಯನ್ನು ಗುರುತಿಸುತ್ತಾರೆ.
ವೈಯೆನ್ಕೆಯವರು 'ಪದ್ಯ ಇಷ್ಟು ಲೈಟಾದ್ರೆ ಹೇಗೆ ಸ್ವಾವಿ , ತೀರ್ಥರೂಪ (ಪದ್ಯ ಇಷ್ಟು ಟೈಟಾದ್ರೆ ಹೇಗೆ ಸ್ವಾವಿ ) ಯಂತಹ ಕೆಲವು ಕವನ ಸಂಕಲನ ಪ್ರಕಟಿಸಿದರು. ಅವು ಕನ್ನಡ ಸಾವಿ ತ್ಯದಲ್ಲಿ ಹೊಸತನವನ್ನು ಸ್ಟೃಸಿದವು. ಓದುಗರಿಗೆ ರಂಜನೆಯ ಜೊತೆಗ ವಿ ಮರ್ಶಾ ದ್ಟೃಕೋನ ದೊರಕುವಂತೆ ಮಾಡಿದವು. 
ವಿ ಶ್ವಾವಿ ತ್ರ.
ಮೇನಕೆ
ಡಾನ್ಸ್ ನೋಡೋದು
ಏನಕ್ಕೆ?
ಆಸ್ಕ್ ವಿ ಸ್ಟರ್
ವೈಯೆನ್ಕೆ.  ವಿ ಗೆ ಪದ್ಯ ಬರೆದು ಅವನ್ನು 'ಕವಿ -ತೆಗಳು' ಎಂದು ಕರೆದವರು ವೈಯೆನ್ಕೆ. (ವಿಜಯ ಕರ್ನಾಟಕ,೨೦೧೦)
ಪತ್ರಕರ್ತ ಹೊನ್ನಾಳಿ ಚಂದ್ರಶೇಖರ್ ಹೇಳುವಂತೆ ವಿ ವೈಯೆನ್ಕೆ ಅವರು ಅಲ್ಲಿಯವರೆಗೂ ಕನ್ನಡ ಸಾವಿ ತ್ಯದಲ್ಲಿ ಇಲ್ಲದಂತೆ ಕವಿ ತೆಗಳನ್ನು ಬರೆದವರು.  ಕವಿ ತೆಗಳನ್ನು ವಿ ಗೂ ಬರೆಯಬಹುದು ಎಂದು ತೋರಿಸಿಕೊಟ್ಟವರು.  ವೈಯೆನ್ಕೆ ಅವರ ಒಂದು ಕವಿ ತೆ ವಿ ಗಿದೆ. 
'ಶಂಕರಲಿಂಗೇಗೌಡ್ರು
ಹಚ್ಚಿಕೊಂಡಿದ್ರು ಪೌಡರು' 
ಇಂತಹ ಅನೇಕ ಕವಿ ತೆಗಳನ್ನು ವೈಯೆನ್ಕೆ ಬರೆದರು. ಅವು ಕನ್ನಡ ಸಾವಿ ತ್ಯಕ್ಕೆ ಹೊಸತನ್ನು ಸ್ಟೃ ಮಾಡಿದವು ಎಂದು ವೈಯೆನ್ಕೆಯವರ ಕವಿ ತೆಗಳಲ್ಲಿನ ಸ್ವರೂಪವನ್ನು ವಿ ವರಿಸುತ್ತಾರೆ.
ಪತ್ರಕರ್ತ, ಸಂಪಾದಕ ಷಡಕ್ಷರಿಯವರು ವಿ ವೈಯೆನ್ಕೆಯವರಿಗೆ ಇತರೆ ವಿ ಷಯಗಳಂತೆ ಸಾವಿ ತ್ಯ ಕ್ಷೇತ್ರದಲ್ಲಿ ಆಳವಾದ ಜ್ಞಾನವಿ ತ್ತು. ಅವರ ಬರಹಗಳು ಇಂದಿಗೂ ಕೂಡ ಪ್ರಸ್ತುತವಾಗಿ ನಿಲ್ಲುತ್ತವೆವಿ  ಎಂದು ಹೇಳುತ್ತಾರೆ. 
ಒಟ್ಟಿನಲ್ಲಿ, ವೈಯೆನ್ಕೆ ಕನ್ನಡ ಸಾವಿ ತ್ಯದ ಅನೇಕ ಮನ್ವಂತರಗಳಿಗೆ ಕಾರಣರಾದವರು. ಕನ್ನಡ ಸಾವಿ ತ್ಯಕ್ಕೆ ಪ್ರತ್ಯಕ್ಷ ಮತ್ತು ಪರೋಕ್ಷವಾದ ಕೊಡುಗೆ ಅಪಾರವಾದದು.

ಮೈಕೇಲ್ ಜಾಕ್ಸನ್ ..!!!

19/02/2012 11:52

 

ವೈಯೆನ್ಕೆಯವರ ಅಂಕಣ ಬರಹ ಮತ್ತು ಸಾ"ತ್ಯಿಕ ಬರಹಗಳ ಪ್ರಮುಖ ಲಕ್ಷಣವೆಂದರೆ 'ಪನ್' ಮತ್ತು "ಡಂಭನಾತ್ಮಕ ಹಾಸ್ಯ.  ವೈಯೆನ್ಕೆರವರಿಗೆ ಇಂಗ್ಲೀಷ್ ಮತ್ತು ಕನ್ನಡ ಎರಡೂ ಭಾಷೆಯಲ್ಲಿ ಪಾಂಡಿತ್ಯ"ತ್ತು ಎರಡೂ ಭಾಷೆಯ ಪದಗಳನ್ನು ಬರೆದು ಮತ್ತೊಂದು ಹೊಸ ಪದ ಹುಟ್ಟುಹಾಕುತ್ತಿದ್ದರು,ಕನ್ನಡ ಪತ್ರಿಕೋದ್ಯಮದಲ್ಲಿ ಈ ರೀತಿಯ ಬರವಣಿಗೆಗೆ ಬಹುಶಃ ವೈಯೆನ್ಕೆಯವರೇ ಮೊದಲಿಗರು.

ಪಾಪ್‌ಗಾಯಕ ಮೈಕಲ್ ಜಾಕ್ಸನ್ ಕುರಿತು ತಮ್ಮ ಲೇಖನ ಒಂದರಲ್ಲಿ "ಗೆ ಹೇಳುತ್ತಾರೆ.

ಮೈಕೆಲ್ ಜಾಕ್ಸನ್ 

ಎಂಥ ಹಾಡು ಹಾಡುತಾನ

ಎಂಥ ಜಾದೂ ಮಾಡುತಾನಾ

ಮೈಕೇಲ್ ಜಾಕ್ಸನ್ 

ಮೈಕೈ ಎಲ್ಲ ಜಾಕಿಸೋಣ

ಮೈಕೈ ಎಲ್ಲ ತಾಕಿಸೋಣ

ಮೈಕೈ ಎಲ್ಲ ಜಾಡಿಸೋಣ.

(ಭಟ್, ೨೦೦೬, ಪುಟ, ೧೬೪.)

ಈ ಕ"ತೆಯ ಉದ್ದೇಶ ನೇರವಾಗಿ ಹಾಸ್ಯವೆನಿಸಿದರೂ ಅವುಗಳಿಗೆ ಹಲವು ಮಗ್ಗಲುಗಳ ಸತ್ಯವುಂಟು. ಅವರ ಆಯ್ಕೆ ಮಾಡಿಕೊಳ್ಳುತ್ತಿದ್ದ ರ್ಶೀಕೆ ಸ್ವತ: ಭಾಷೆಂದ "ಶೇಷತೆ ಕೂಡಿರುತ್ತಿತ್ತು. ಸಾ"ತ್ಯ ರಾಜಕೀಯ, ಅಂತರ್‍ಟಾಯ ಸಂಬಂಧದಂತ ಯಾವುದೇ "ಷಯವನ್ನು ತಮ್ಮ ಭಾಷೆಯ ಪರಿಧಿಗೆ ತಂದುಕೊಂಡು ಚರ್ಚಿಸುತ್ತಿದ್ದರು.

ಅವರ ಮತ್ತೊಂದು ಲೇಖನದಲ್ಲಿ ಕನ್ನಡ ಭಾಷೆಯಲ್ಲಿ ಆಂಗ್ಲ ಪದಗಳ ಬಳಕೆಯನ್ನು "ರೋಧಿಸುವವರ ಕುರಿತು ನಾ.ಕಸ್ತೂರಿಯವರ ಕವನವನ್ನು ಉದಾಹರಿಸುತ್ತಾರೆ. 

ಕನ್ನಡ ಇಂಗ್ಲೀಷ್ ಕಿಂಚಿತ್ತು ಬೆರಸಲದು

ಸಿನ್ನುಗಳ ಲಿಸ್ಟಿನಲಿ ಹೈಯಸ್ಟು ಅದರಿಂದ 

ಫನ್ನಿಗೂ "ಕ್ಸದಿರು-ಸರ್ವಜ್ಞ. (ಭಟ್, ೨೦೦೬) 

 ಇದೇ ಲೇಖನದಲ್ಲಿ ವೈಯನ್ಕೆ ಕನ್ನಡ ಭಾಷೆ ಒಂದೇ ಅಲ್ಲ, ಪ್ರಪಂಚದ ಇತರೆ ಬಾಷೆಯಲ್ಲಿ ಇಂಗ್ಲೀಷ್ ಪದಗಳು ಆ ಭಾಷೆಯ ಸತ್ವದಂತೆ ಆಗಿವೆ ಎಂದು ಹೇಳುತ್ತಾರೆ.  ಜಪಾನೀಯರಿಗೆ 'ಲ' ಉಚ್ಚಾರಣೆ ಕಷ್ಟ ಎಂಬುದನ್ನು ಪ್ರಸ್ತಾಪಿಸುತ್ತಾರೆ. 

ಅವರ ಮತ್ತೊಂದು ಲೇಖನ 'ಮದ್ವ-ಮಾಕ್ಸ್-ಎಕ್ಕುಂಡಿ ಗೋಪಾಲಕೃಷ್ಣ ಅಡಿಗರ ಮತ್ತು ಸು.ರಂ ಎಕ್ಕುಂಡಿಯವರ ಜೀವನ ದರ್ಶನ ಕುರಿತು ಹೇಳುತ್ತಾ "ಗೆ ಹೇಳುತ್ತಾರೆ. 

ಸುಬ್ಬಣ್ಣ ರಂಗನಾಥ

'ಕನ್ನಡದ ಕೀಟ್ಸ್'

ಎಂದಾರೋ ಕರೆದದ್ದು ಕೇಳಿ

ಕುದಿದ್ದರು

ಲೋಕಲ್ ಎಲಿಯಟ್

ಅಂಡ್ ಏಟ್ಸ್.

(ಭಟ್,೨೦೦೬, ಪುಟ ೨೩೮).

ಅಂದರೆ ಈ ಕ"ತೆಯ ಆಶಯ ಅಡಿಗ, ಎಕ್ಕುಂಡಿ ಇಬ್ಬರೂ ಉಳಿದ ಪ್ರಸಿದ್ದ ಕ"ಗಳಂತೆ ಬರಿಯ ಕಾವ್ಯ ವ್ಯವಸಾಯದಲ್ಲಿ ನಿರತರಾಗದೆ, ಜೀವನದ ಅಂದಂದಿನ ಚಳುವಳಿ, "ಚಾರಗಳು, ಆಸಕ್ತಿ ತೋರಿ ಅವುಗಳಲ್ಲಿ ತಮ್ಮನ್ನು ತೊಡಗಿಸಿಕೊಂಡವರು. ಅದೇ ರೀತಿ ಸು.ರಂ.ಎಕ್ಕುಂಡಿ ಕನ್ನಡದ ಕೀಟ್ಸ್ ಎಂದಾಗ ಸಾ"ತ್ಯವಲಯದಲ್ಲಿ ಸಂಕುಚಿತಗೊಂಡವರ ಕುರಿತು ವೈಯೆನ್ಕೆ ಈ ಲೇಖನದಲ್ಲಿ "ಢಂಭನಾತ್ಮಕವಾಗಿ ಹೇಳಿದ್ದಾರೆ. 

"ಂದೆ ವೃತ್ತಪತ್ರಿಕೆಗಳು ಆರಂಭವಾದಾಗ ಜಾ"ರಾತು ಹಾಕಿದ ನಂತರ ಸುದ್ದಿ ಹಾಕುತ್ತಿದ್ದರು, ವೃತ್ತ ಪತ್ರಿಕೆಯಲ್ಲಿ ಜಾ"ರಾತು ಅನಿವಾರ್‍ಯವೆಂಬಂತೆ ಹಾಕುತ್ತಿರುವುದನ್ನು ಪ್ರಸ್ತಾಪಿಸುತ್ತಾ 'ಆಡ್ ಮ್ಯಾಡ' ಎಂಬ ಲೇಖನದಲ್ಲಿ ಕವನವನ್ನು "ಗೆ ಪ್ರಸ್ತಾಪಿಸುತ್ತಾರೆ. 

ಸುಂದರಿ ಜಾ"ರಾ

'ಥೂ'

ಎಂದರೆ 

ಅದೇ

ಜಾ"ರಾ-ಥೂ.

(ಭಟ್.೨೦೦೬)

ವೈಯೆನ್ಕೆ ಹೆಚ್ಚಾಗಿ ಬರೆದಿರುವುದು "ಚಾರಭರಿತ ಹಾಸ್ಯ ಸಾ"ತ್ಯವನ್ನೇ ಅವರದು ಎಂತಹ ಹಾಸ್ಯ ಎಂದರೆ ಅಂತರ್‍ಟ್ರಾಯ ಮಟ್ಟ ಮುಟ್ಟುವ ಹಾಸ್ಯ!.  "ನೋದ ಅಥವಾ ದ್ವಂದ್ವಾರ್ಥದಿಂದ ಕೂಡಿದ ರ್ಶೀಕೆ ಮತ್ತು ಪದ ಪ್ರಯೋಗಗಳಲ್ಲಿ ವೈಯೆನ್ಕೆ ಸಿದ್ದ ಹಸ್ತರು. ಕೇವಲ ದ್ವಂದ್ವಾರ್ಥದ ಪದಗಳನ್ನು ಸ್ಟೃಸುವುದರಲ್ಲಿಯೇ ಉತ್ತಮ ರ್ಶೀಕೆಗಳನ್ನು ಕೊಡುವುದರಲ್ಲಿ ಪ್ರಸಿದ್ದರು.

'ಪ್ರತಿ-ಪದಾ-ರ್ಥ' ಎಂಬ ಲೇಖನದ ರ್ಶೀಕೆ ಈ ಮಾತಿಗೆ ಉತ್ತಮ ನಿದರ್ಶನ.  ಈ ಲೇಖನದಲ್ಲಿ ಭಾಷೆಯಲ್ಲಿನ ಪದಗಳ ಅರ್ಥ ಕುರಿತು ಹಲವು ಮಗ್ಗಲುಗಳನ್ನು ಚರ್ಚಿಸಿದ್ದಾರೆ.  ವೈಯೆನ್ಕೆಯ ಹಾಸ್ಯ ಪ್ರಜ್ಞೆಯನ್ನು ಸೂಚಿತ ಈ ಲೇಖನವನ್ನು ನೋಡಬಹುದು. 

ಅಪರಾಧಿಗಳಿಗೆ ಥರ್ಡ್ ಡಿಗ್ರಿ ಮತ್ತಿತರ ರೀತಿಯ ಶಿಕ್ಷೆ "ಧಿಸುವುದಕ್ಕೆ ಬದಲಾಗಿ "ಪ್ನಾಟಿಸಂ-ಸಮ್ಮೋಹಕ "ದ್ಯೆ ಬಳಸಿ ನಿಜ ಪತ್ತೆ ಹಚ್ಚುವ ಕ್ರಮ ಸೂಕ್ತವಲ್ಲವೆ? ಎಂದು ಮನಶಾಸ್ತ್ರಭಾಗದಲ್ಲಿ ಸೂಚಿಸಿದ್ದಾರೆ ಎಂದು ಉಲ್ಲೇಖಿಸುತ್ತಾ ತಮ್ಮ ಕವನದಲ್ಲಿ "ಗೆ ಹೇಳುತ್ತಾರೆ. 

'ತಪ್ಪೊಪ್ಪಿಕೊಳ್ಳದವರ

ಬಾ, ಬೀಗ-

ಕೈ

ಕೀ

ಹಲವಾರು ಪೆಗ್

"ಸ್ಕಿ' ಎಂಬ ಸಾಲುಗಳನ್ನು ಉದ್ದರಿಸಿ 'ಬಾ ಬಿಡದವರಾರು ಗುಂಡಿಗೆ? ಕೈ ಕೊಡದವರಾರು ಫ್ರೆಂಡಿಗೆ? ಮೇಲಿನ ಕವನದಲ್ಲಿ "ಡಂಭನಾತ್ಮಕ ಹಾಸ್ಯ ಎದ್ದು ಕಾಣುತ್ತದೆ. (ಭಟ್,೨೦೦೬).

ಬದುಕಿನ ಬಗೆಗೆ ಅದಮ್ಯ ಚೇತನ ಇಟ್ಟುಕೊಂಡಿದ ವೈಯೆನ್ಕೆ, ಬರವಣಿಗೆಯ "ಚಾರದಲ್ಲಿ ಬಹಳ ಗಂಭೀರವಾದ ನುಡಿಗಳನ್ನಾಡುತ್ತಿದ್ದರು. (ಸುಂದರ, ೨೦೦೬) ಯಾವುದೇ ಒಂದು ಲೇಖನದ ಜನಪ್ರಿಯತೆಗೆ ಅದರ ಭಾಷೆ ಮತ್ತು ನಿರೂಪಣೆಯ ಶೈಲಿ, ಚರ್ಚಿಸುವ "ಷಯ ಮುಖ್ಯವಾಗುತ್ತದೆ. ಜೊತೆ ಬರಹಗಳು ಸಹೃದುಗರನ್ನು ಒಂದು ಕ್ಷಣ ಚಿಂತನೆಗೆ ತೊಡಗುವಂತೆ ಮಾಡಬೇಕು. ಇವು ವೈಯೆನ್ಕೆಯವರ ಬರಹದಲ್ಲಿ ಪ್ರಮುಖವಾಗಿ ಇದ್ದು ಕಾಣುತ್ತವೆ. 

ವೈಯೆನ್ಕೆಯವರ ಪ್ರತಿ ಲೇಖನವೂ ಯಾವುದೋ ಮೂಲೆಯ ಪ್ರಸಂಗದಿಂದ ಪ್ರಾರಂಭವಾಗಿ, ಭಾಷೆಯೋಂದಿಗೆ ನಾಟ್ಯವಾಡುತ್ತ ಅಂತರ್‍ಟ್ರಾಯ ಮಟ್ಟದಿಂದ "ಚಾರವನ್ನು ಸರಳವಾಗಿ ಚರ್ಚಿಸುತ್ತಿದ್ದರು. ಓದುಗರ "ಚಾರ ಮಂಥನಕ್ಕೆ ಯಾವುದೇ ಭಂಗ ಉಂಟು ಮಾಡುತ್ತಿರಲಿಲ್ಲ. ಈ ಕಾರಣವಾಗಿಯೇ ವಂಡರ್‌ಕಣ್ಣು ಜನಪ್ರಿಯವಾಗಿತ್ತು. 

'ಭಾರತದ ರಾಯಭಾರಿ' ಎಂಬ ಲೇಖನದಲ್ಲಿ ಪ್ರಸಂಗ ಒಂದು "ಗಿದೆ. 

ಟರ್ಕಿಯ ಆಧ್ಯಕ್ಷರ ಹೆಂಡತಿ ಗರ್ಬಚೋವ್‌ರ ಪತ್ನಿ ರೈಸಾಳನ್ನು ಭೇಟಿ ಮಾಡಿದಾಗ ಹೇಳಿದಳಂತೆ. "ನನ್ನ ಗಂಡ  ನನ್ನ ಹುಟ್ಟು ಹಬ್ಬಕ್ಕೆ ಅಪೂರ್ವವಾದ ಕಾರ್ ಕೊಟ್ಟ'

ರೈಸಾ ಹೇಳಿದಳು, ನಾನಗಿದ್ದರೆ ಒಂದು ಪಿಕಸೋ ಬೇಕೆಂದು ಕೇಳುತ್ತಿದ್ದೆ.

ಟರ್ಕಿ ಅಧ್ಯಕ್ಷರ ಪತ್ನಿ: ಹೌದಾ? ಪಿಕಾಸೋಗೆ ಎಷ್ಟು ಬಾಗಿಲು?

'ಪಿಕಾಸೋ' ಕಾರಲ್ಲ ಮಹಾನ್ ಕಲಾ"ದ ಪಿಕಾಸೋ ರಚಿಸಿದ ಚಿತ್ರ ಎಂದು 

ಆಕೆಗೆ ಗೊತ್ತಿರಲಿಲ್ಲ. 

ಈ ಒಂದು ಲೇಖನ ಭಾರತದ ಅಂಬಾಸಿಡರ್ ಕಾರ್‌ನ "ಚಾರದಿಂದ ಪ್ರಾರಂಭವಾಗಿ, ಅಂತರ್‍ಟ್ರಾಯಾ "ಚಾರವನ್ನು ಸಂದರ್ಭ ಎನ್ನುವಂತೆ ಚರ್ಚಿಸುವುದು ಸೊಜಿಗ ಹುಟ್ಟಿಸುತ್ತದೆ.

ವೈಯೆನ್ಕೆ ಬರವಣಿಗೆಯಲ್ಲಿ ಎದ್ದು ಕಾಣುವುದು ಅವರ ಅನನ್ಯ ದ್ಟೃ. ಅದನ್ನು ಸದಾ ತೆರೆದಿಟ್ಟುಕೊಳ್ಳುವ ಜಾಗೃತ ಮನಸ್ಸು ಹಾಗೂ "ಷಯಗಳ ಬಗೆಗಿರುವ ತೀವ್ರ ಕುತೂಹಲ, ಸಹಜವಾಗಿಯೇ ಈ ಕುತೂಹಲ ಓದುಗನ ಕುತೂಹಲವಾಗುತ್ತಿದ್ದ ರೀತಿ; "ಗಾಗಿ ಅವರ ಲೇಖನ ಎಂದಿಗೂ ಸೋಲಲಿಲ್ಲ. ಅಂಕಣ ಬರಹಕ್ಕಿರುವ ಏಕತಾನತೆ,  ಸಂಕುಚಿತತೆ, "ಷಯ ಪ್ರಸ್ತಾಪದ ಕಿರು ವ್ಯಾಪ್ತಿ ಇವುಗಳಿಗೆ ಇರಲಿಲ್ಲ.  ಅವರು ಯಾವುದೇ ಒಂದು "ಷಯವನ್ನು 'ರೂಪಕದ ಮಾದರಿ'ಯಲ್ಲಿ ಚರ್ಚಿಸುತ್ತಿದುದ್ದು "ಶೇಷ.

 

ತಾಜಾ ಹುಲ್ಲಿನ ಹಾಗೆ ವೈಯೆನ್ಕೆ ಕವಿತೆ

20/09/2010 14:02
 
ಪತ್ರಿಕೋದ್ಯಮದ ಆರಂಭದ ಕಾಲದಲ್ಲಿ ಪತ್ರಿಕೆಗಳು ಕೇವಲ ವರದಿಗಾರಿಕೆಯೊಂದೇ ತಮ್ಮ ಮುಖ್ಯ ಗುರಿಯಾಗಿಸಿಕೊಂಡಿದ್ದವು.  ನಂತರದ ವಿಕಸನ ಕಾಲದಲ್ಲಿ ಹಲವು ಕ್ರಿಯಾಶೀಲ ಬರಹದ ರೂಪಗಳಿಗೆ ನಾಂದಿಯಾಯಿತು.  ಪತ್ರಿಕೆಗಳು ಒಂದು ರೀತಿಯಲ್ಲಿ ಚರ್ಚೆಯ ವೇದಿಕೆಯಾದವು.  ಪತ್ರಿಕೆಗಳಲ್ಲಿ ಸಾಹಿತ್ಯ, ವಿಮರ್ಶೆ, ಸಂಪಾದಕೀಯ ಮುಂತಾದ ಬರಹದ ರೂಪಗಳು ಮಹತ್ವ ಪಡೆದುಕೊಂಡವು.  ಪ್ರಸ್ತುತ ದಿನಗಳಲ್ಲಿ ಅಂಕಣ ಸಾಹಿತ್ಯವು ಹೆಚ್ಚು ಸಹೃದಯ ಪ್ರಿಯ ಬರಹದ ವಿಧಾನವಾಗಿದೆ. 
ಕನ್ನಡದ ಮಟ್ಟಿಗೆ ಅಂಕಣವು ಪತ್ರಿಕೆಯ ಒಂದು ಮನೋಧರ್ಮವಾಗಿದೆ.  ಇಂದು ಬಹುತೇಕ ಸಣ್ಣ ಹಾಗೂ ದೊಡ್ಡ ಪತ್ರಿಕೆಗಳು ಅಂಕಣಗಳನ್ನು ಪ್ರಕಟಿಸುವುದನ್ನು ನೋಡಬಹುದು. ಲಂಕೇಶರ ’ಟೀಕೆ-ಟಿಪ್ಪಣ’, ಟಿ.ಎಸ್.ಆರ್‌ರ ’ಛೂಬಾಣ’, ಹಾ.ಮಾ. ನಾಯಕರ ’ಸ್ವ್ವಗತ’ ಪಾಟಿ ಪುಟ್ಟಪ್ಪರ ಅಂಕಣಗಳು ಕನ್ನಡ ಪತ್ರಿಕೋದ್ಯಮದಲ್ಲಿ ಅಂಕಣ ಸಾಹಿತ್ಯದ ಒಂದು ಮಾದರಿಯನ್ನೇ ಸೃಷ್ಟಿಮಾಡಿವೆ.  ಈ ಮಾದರಿ ಸೃಷ್ಟಿಯಲ್ಲಿ ವೈಯೆನ್ಕೆಯವರ ವಂಡರ್‌ಗಣ್ಣು ಒಂದು.
ವೈಯೆನ್ಕೆ ಅಂಕಣದ ಹೊರತಾಗಿ ಬರೆದಿದ್ದು ಕಡಿಮೆ, ಬರೆಸಿದ್ದೆ ಜಾಸ್ತಿ. ಅವರ ವಂಡರ್‌ಗಣ್ಣು ಅಂಕಣ ಕನ್ನಡಪ್ರಭ ಪತ್ರಿಕೆಯಲ್ಲಿ ಪ್ರತಿ ಗುರುವಾರ ಪ್ರಕಟವಾಗುತ್ತಿದ್ದು,ತನ್ನದೇ ಆದ ವಿಶಿಷ್ಟ ಓದುಗ ವರ್ಗವನ್ನು ಹೊಂದಿತ್ತು. (ಭಟ್, ೧೯೯೯)
ವೈಯೆನ್ಕೆಯವರು ಅಂಕಣ ಬರಹದಂತೆ ಇತರೆ ಕೆಲವು ಕವಿತೆಗಳು ಭಾಷೆಯ ವಿನೋಧವನ್ನು ಸೃಷ್ಟಿಸುವುದರ ಮೂಲಕ ಗಂಭೀರ ಚಿಂತನೆಯ ವಿಷಯದ ಚರ್ಚೆಯನ್ನು ನೆಡೆಸುವಂತೆ ಪ್ರೇರೆಪಿಸುತ್ತಿದ್ದವು.  ಕವಿ ಕೀರ್ತಿನಾಥ ಕುರ್ತಕೋಟಿ ವೈಯೆನ್ಕೆ ಬರಹದ ಕುರಿತು ಹೀಗೆ ಹೇಳುತ್ತಾರೆ,  ’ವೈಯೆನ್ಕೆ ಅವರ ಕಾವ್ಯದಲ್ಲಿ ಬಹುಪಾಲು ಹಾಸ್ಯಹುಟ್ಟುವುದು ಅಲ್ಲಿಯ ಅನಿರೀಕ್ಷಿತ ಪ್ರಾಸಗಳಿಂತ,ಅಲ್ಲಿನ ಸನ್ನಿವೇಶಗಳಿಂದ. ವೈಯೆನ್ಕೆ ಅವರಿಗೆ ಭಾಷೆಯ ಮೇಲೆ  ಹೆಚ್ಚು ಹಿಡಿತವಿತು’.  ವಿಮರ್ಶಕ ಡಿ.ಆರ್.ನಾಗರಾಜ್ ಹೇಳುವಂತೆ, ’ವೈಯೆನ್ಕೆಯವರ ಈ ಮಾದರಿಯ ವಿಶೇಷತೆ ಎಂದರೆ ಭಾಷೆ ಜೊತೆಗಿನ ನಾಟ್ಯಾತ್ಮಕ ಸಂಬಂಧ’ ಮುಂದುವರೆದು ಅವರ ಟಿ.ಎಸ್.ಆರ್ ಮತ್ತು ಖಾದ್ರಿ ಶಾಮಣ್ಣರೊಂದಿಗೆ ವೈಯೆನ್ಕೆಯವರ ವಿಶೇಷತೆಯನ್ನು ಗುರುತಿಸುತ್ತಾರೆ. (ಭಟ್, ೧೯೯೯)
ವೈಯೆನ್ಕೆ ಅವರ ಬರಹದಲ್ಲಿ ಸಹಜ ಗಾಂಭೀರ್ಯ ಇಲ್ಲದಿದ್ದರೂ, ಅವುಗಳ ವಿಚಾರದಲ್ಲಿ ಗಂಭೀರ ಪರಿಣಾಮ ಹೆಚ್ಚು.  ಅವರು ಎಂದೂ ಇತರ ಬರಹಗಾರರಂತೆ ಅಂಕಣ ಹೀಗೆ ಇರಬೇಕು ಎಂದು ಕಟ್ಟು ಪಾಡು ಪಾಲಿಸಿದವರಲ್ಲ. ಇನ್ನು ವೈಯೆನ್ಕೆ ಅವರು ಹತ್ತಾರು ಪುಸ್ತಕಗಳನ್ನು ಬರೆದಿದ್ದಾರೆ. ಆದರೆ ಅವರು ಬರೆಯಬಹುದಾದಷ್ಟು ಬರೆದಿಲ್ಲ. ಪ್ರಜಾವಾಣಿಯಿಂದ ನಿವೃತ್ತಿಯನ್ನು ಹೊಂದಿದಾಗ ಹಲವಾರು ಕವಿತೆಗಳನ್ನು ಬರೆದರು. ವೈಯೆನ್ಕೆ ಅವರು ಪತ್ರಿಕೋದ್ಯಮದಂತೆ ಸಾಹಿತ್ಯವನ್ನು ಆಸಕ್ತಿಯಿಂದ ನೋಡಿದವರು.  ಕನ್ನಡ ಸಾಹಿತ್ಯದ ನವ್ಯದ ಬೆಳವಣಿಗೆಯ ಆಧ್ವರ್ಯರಂತ, ವೈಯೆನ್ಕೆಯವರಿಗೆ ಸಾಹಿತ್ಯದ ನಂಟು ಚಿಕ್ಕ ವಯಸ್ಸಿನಲ್ಲಿಯೇ ಆಗಿದ್ದು, ಟಿ. ಪಿ ಕೈಲಾಸಂ ಅವರ ಸಾಹಿತ್ಯವನ್ನು ಅಪಾರ ಆಸಕ್ತಿಯಿಂದ ಓದಿಕೊಂಡವರು. ’ಸತತವಾಗಿ ಅಂಕಣಗಳನ್ನು ಬರೆಯುತ್ತಾ ಬಂದಾಗ ಅದೊಂದು ಯಾಂತ್ರಿಕ ಕರ್ಮವೇ ಆಗಿಬಿಟ್ಟು ಅವು ತಮ್ಮ ಸ್ವಾರಸ್ಯ ಸೌಂದರ್ಯವನ್ನು ಕಳೆದುಕೊಳ್ಳುವ ಅಪಾಯ ಎದುರಾಗುವುದುಂಟು (ನಾಯಕ,೨೦೦೩) ಇಂತಹ ಅಪಾಯದಿಂದ ವೈಯೆನ್ಕೆಯವರ ಬರಹಗಳು ಬಹುತೇಕವಾಗಿ ಪಾರಾಗಿವೆ.
’ವೈ.ಎನ್.ಕೆ ಕಾವ್ಯ ಪ್ರಪಂಚ’ ಎಂಬ ಲೇಖನದಲ್ಲಿ ಸಾಹಿತಿ ಪಿ.ಶ್ರೀನಿವಾಸ ವೈಯೆನ್ಕೆಯರ ಸಾಹಿತ್ಯದ ಕುರಿತು ಹೀಗೆ ಹೇಳುತ್ತಾರೆ. ಈ ಬರವಣಿಗೆ ನನಗೆ ನಿಜಕ್ಕೂ ಪ್ರಿತಿಯ, ಹೆಮ್ಮೆಯ ಸಂತೋಷದ ಕೆಲಸ ವೈಯೆನ್ಕೆ ರಚಿಸಿರುವ ಕಾವ್ಯ ಪ್ರಪಂಚ ಮನೋರಂಜಿತ ಹಾಗೂ ಶಕ್ತಿಯುತ. ಹಲವಾರು ಮುಖ್ಯ ಮನುಷ್ಯ ಸತ್ಯಗಳನ್ನು ಲವಲವಿಕೆಯಿಂದ ಸ್ಪಷ್ಟ ಮಾಡುತ್ತದೆ. (ಸುಂದರ್, ೨೦೦೬)
ಖ್ಯಾತ ಸಾಹಿತಿ ನಾ.ಡಿಸೋಜ ವೈಯೆನ್ಕೆಯವರ ಬರಹದ ವಿಶೇಷತೆ ಕುರಿತು ಹೇಳುವಂತೆ ದಿನ ನಿತ್ಯದ ಸುದ್ದಿಗಳು ಅವಸರ ಅವಸರದಲ್ಲಿ ಬರುವಾಗ ಅವುಗಳನ್ನು ಓದುಗರಿಗೆ ನೀಡುವ ಧಾವಂತದಲ್ಲಿ ಪತ್ರಕರ್ತ ಈ ಸುದ್ದಿಗಳ ಆಚೆ, ಈಚೆಗೆ ಕಣ್ಣು ಹಾಯಿಸದಷ್ಟು ಬಿಸಿಯಾಗಿರುತ್ತಾರೆ.  ಆದರೆ ವೈಯೆನ್ಕೆ ಈ ಮಾತಿಗೆ ಅಪವಾದವಾಗಿದ್ದರು. (ಸುಂದರ, ೨೦೦೬)
’ಮಾತು ಮಾತು ಮಥಿಸಿ ಬಂದ ನಾದದ ನವನೀತ 
ಹಿಗ್ಗ ಬೀರಿ ಹಿಗ್ಗಲಿತ್ತು ತನ್ನ ತಾನೆ ಪ್ರೀತ
ಅರ್ಥವಿಲ್ಲ ಸ್ವಾರ್ಥವಿಲ್ಲ ಬರಿಯ ಭಾವಗೀತೆ. 
(ಸುಂದರ, ೨೦೦೬)
ಎಂಬ ಸ್ವತ: ವೈಯೆನ್ಕೆಯವರ ಕವಿತೆಯಂತೆ ಅವರ ಬರಹಗಳು ಸ್ವಾರ್ಥವಿಲ್ಲದ, ನಿಸ್ವಾರ್ಥ ಭಾವಗೀತದಂತೆ, ಭಾರಯುತ ಭಾಷೆಯಿಂದ ದೂರ ಉಳಿದು ಬರೆದವರು.
ವೈಯೆನ್ಕೆ ಯಾವುದೇ ’ಇಸಂ’(ಸಿದ್ದಾಂತ)ವನ್ನು ನಂಬಿಕೊಂಡವರಲ್ಲ, ಆ ಕಾಲದಂತೆ ಅವರು ತಮ್ಮ ಬದುಕಿನ ಸಿದ್ದಾಂತ ಅರಿತಿದ್ದರು.  ಪತ್ರಕರ್ತರಾಗಿ ಕನ್ನಡದ ಎರಡು ಜನಪ್ರಿಯ ದಿನಪತ್ರಿಕೆಗಳ ಸಂಪಾದಕರಾಗಿ ಅಪಾರ ಗೌರವವನ್ನು ಸಂಪಾದಿಸಿದಾಗಲೂ ವೈಯೆನ್ಕೆ ಯಾರ ಹಿಂದೆಯೂ ಹೋಗಲಿಲ್ಲ.  ಯಾವ ಪಕ್ಷವನ್ನು ಬೆಂಬಲಿಸಲಿಲ್ಲ. ಪತ್ರಿಕೋದ್ಯಮವನ್ನು ಅಸ್ತ್ರವಾಗಿ ಮಾಡಿಕೊಳ್ಳಲಿಲ್ಲ, ಬದಲಿಗೆ ಅವರ ನಡಿಗೆಯಂತೆ ಬರವಣಿಗೆ ಕೂಡ ಸರಾಗವಾಗಿತ್ತು.
ಕವಿ ಬಿ.ಆರ್.ಲಕ್ಷ್ಮರಾವ್, ಗಿರೀಶ್ ರಾವ್(ಜೋಗಿ) ಸೇರಿದಂತೆ ಅನೇಕ ಪ್ರಸಿದ್ದ ಕವಿಗಳಿಗೆ, ಸಿನಿಮಾ ನಿರ್ದೇಶಕರಿಗೆ, ನಾಟಕಕಾರರಿಗೆ ವೈಯೆನ್ಕೆಯವರ ವೈಕ್ತಿತ್ವದ ಪ್ರಭಾವವಾಗಿರುವುದನ್ನು ನಾವು ಸ್ಮರಿಸಿಕೊಳ್ಳಬಹುದು. ಕನ್ನಡದಲ್ಲಿ ಪತ್ರಿಕೋದ್ಯಮ ಕುರಿತಂತೆ ಪುಸ್ತಕಗಳು ಬರದೇ ಇದ್ದ ಸಂದರ್ಭದಲ್ಲಿ ’ಇದು ಸುದ್ದಿ,ಇದು ಸುದ್ದಿಯಲ್ಲ’ ಎಂಬ ಕೃತಿಯನ್ನು ರಚಿಸಿದರು. ಆ ಮೂಲಕ ತಮ್ಮ ವೃತ್ತಿ ಬದುಕಿನ ಕಾಣಿಕೆಯಾಗಿ ನೀಡಿದರು (ಭಟ್, ೧೯೯೯)
ಕವಿ ಚಂದ್ರಶೇಖರ್ ಕಂಬಾರರು ಒಂದು ಕವಿತೆಯಲ್ಲಿ ವೈಯೆನ್ಕೆಯವರು ಬರಹ, ಕವಿತೆಯ ಆಂತರ್ಯ್ಯವನ್ನು ಹೀಗೆ ಹಿಡಿದಿಟ್ಟಿದ್ದಾರೆ.
ತಾಜಾ ಹುಲ್ಲಿನ ಹಾಗೆ ವೈಯೆನ್ಕೆ ಕವಿತೆ
ಹುಲ್ಲು ಪ್ರೀತಿಸಲಿಕ್ಕೆ ಕಷ್ಟಪಡಬೇಕೆ?
ಕಣ್ಣು ತೆರೆಯುವುದಷ್ಟೇ ನಿಮ್ಮ ಕೆಲಸ
ಉಳಿದ್ದನ್ನು ಅದೇ ಮಾಡುತ್ತದೆ.
(ಪದ್ಯ ಇಷ್ಟು ಲೈಟ್ ಆದ್ರೆ ಹೇಗೆ ಸ್ವಾಮಿ? ಕವನ ಸಂಕಲನದಿಂದ)
ಕನ್ನಡ ಪತ್ರಿಕಾರಂಗದಲ್ಲಿ ವೈಯೆನ್ಕೆಯವರ ಹೆಸರು ಚಿರಪರಿಚಿತ, ಅವರ ವೃತ್ತಿ ಮತ್ತು ಪ್ರೌವೃತ್ತಿ ಎರಡು ಬರಹವೇ ಆಗಿದ್ದು, ಆಸಕ್ತಿಯ ಕ್ಷೇತ್ರಗಳು ಹಲವು.  ಇಂತಹ ಶ್ರೇಷ್ಠ ಪತ್ರಕರ್ತ, ಅಂಕಣಕಾರನ ಕುರಿತು ಅನೇಕ ಬರಹಗಾರರು, ಕವಿಗಳು, ಪತ್ರಕರ್ತರು ಅವರ ವ್ಯಕ್ತಿತ್ವ  ಮತ್ತು ಪತ್ರಿಕಾ ಬದುಕಿನ ಕುರಿತು ಬರೆದಿದ್ದಾರೆ. 
ವಿಮರ್ಶಕ ಜಿ.ಎಸ್.ಅಮೂರರು ತಮ್ಮ ’ಮಾತು ಮಾತು ಮಥಿಸಿ’ ಎಂಬ ಲೇಖನದಲ್ಲಿ ವೈಯೆನ್ಕೆಯವರ ಬರಹ-ವ್ಯಕ್ತಿತ್ವ ಕುರಿತು ಹೀಗೆ ಹೇಳುತ್ತಾರೆ. ವೈಯೆನ್ಕೆ ಅಪರೂಪದ ವ್ಯಕ್ತಿ, ಅಪರೂಪದ ಬರಹಗಾರ, ಅವರಲ್ಲಿ ನಾನು ಬಹುವಾಗಿ ಮೆಚ್ಚಿದ ಅಂಶ ಗುಣಮುಕ್ತತೆ, ಅವರ ಆಸಕ್ತಿಗಳು ಹಲವಾರು.  ರಾಜಕೀಯ, ಸಿನಿಮಾ, ಸಾಹಿತ್ಯ, ಪ್ರವಾಸ ಹೀಗೆ ಅವುಗಳನ್ನು ಹೆಸರಿಸುತ್ತ ಹೋಗಬಹುದು.
ಕವಿ ಕೆ.ಎಸ್.ನ ’ಕಾಲಕ್ರೀಡೆ’ ಸಂಕಲನದಲ್ಲಿ ಅದರ ವೈಶಿಷ್ಟ್ಯತೆ ಕುರಿತು ಹೀಗೆ ಹೇಳುತ್ತಾರೆ. ’ಕಾಲಕ್ರೀಡೆ’ಯಲ್ಲಿ ಕಾಲ ಕ್ರೀಡೆ ಶಕ್ತಿಯ ಸೀಮೆಯನ್ನು ವಿಸ್ತರಿಸುವ ಮಾತು ಬರುತ್ತದೆ.  ನಿಮ್ಮ ಕಾಲಕ್ರೀಡೆಯಲ್ಲೂ ನೀವಂತಹ ಪ್ರಯತ್ನ ಮಾಡಿದ್ದೀರೆಂದು ನನ್ನ ಭಾವನೆ’ ಎಂಬ ಅವರ ಮಾತು ವೈಯೆನ್ಕೆಯವರ ಕಾಲಕ್ರೀಡೆ ಲೇಖನ ಬರಹಗಳು ಸiಕಾಲೀನ ಜೀವನಾನುಭವಕ್ಕೆ ಸಂಬಂಧಿಸಿದ ಟೀಕೆ, ವಿಮರ್ಶೆಯನ್ನು ಧ್ವನಿಸುತ್ತಿದ್ದವು ಎಂಬುದನ್ನು ನೋಡಬಹುದು. 
ವೈಯೆನ್ಕೆಯವರ ಕುರಿತ ಬರಹಗಳು ತೀರಾ ಕಡಿಮೆ. ಈ ಅತ್ಯಲ್ಪ ಕೃತಿಗಳಲ್ಲಿ ’ವಂಡರ್ ವೈಯೆನ್ಕೆ’ ಒಂದು. ಇದು ಕನ್ನಡದ ಮಟ್ಟಗೆ ಅಪರೂಪದ ಕೃತಿಯಾಗಿದೆ. ಏಕೆಂದರೆ ಸಂಪಾದಕ, ಪತ್ರಕರ್ತರೊಭ್ಬರ ಕುರಿತಾಗಿ ಅನೇಕ ಪತ್ರಕರ್ತ, ಕವಿಗಳು, ಬರಹಗಾರರ ಕುರಿತು ಬರೆದ ಬರಹಗಳ ಸಂಗ್ರಹ ಕೃತಿಯಾಗಿದೆ. ‘ಇನ್ನು ಕೆಲವು ಕೃತಿಗಳೆಂದರೆ ’ನನ್ನ ಪ್ರೀತಿಯ ವೈಯೆನ್ಕೆ’ ಮತ್ತು ವೈಯೆನ್ಕೆಯವರ ಬೆಸ್ಟ್ ಆಫ್ ವಂಡರ‍್ಸ್’. ನನ್ನ ಪ್ರೀತಿಯ ವೈಯೆನ್ಕೆ ಅವರ ಬದುಕಿನ ಕುರಿತು ಚಿತ್ರಣವಿದ್ದರೆ. ಬೆಸ್ಟ್ ಆಫ್ ವಂಡರ‍್ಸ್ ಕೃತಿಯ ಅವರ ಅಂಕಣ ಬರಹದ ಸಂಗ್ರಹವಾಗಿದೆ.