ಮೈಕೇಲ್ ಜಾಕ್ಸನ್ ..!!!
ವೈಯೆನ್ಕೆಯವರ ಅಂಕಣ ಬರಹ ಮತ್ತು ಸಾ"ತ್ಯಿಕ ಬರಹಗಳ ಪ್ರಮುಖ ಲಕ್ಷಣವೆಂದರೆ 'ಪನ್' ಮತ್ತು "ಡಂಭನಾತ್ಮಕ ಹಾಸ್ಯ. ವೈಯೆನ್ಕೆರವರಿಗೆ ಇಂಗ್ಲೀಷ್ ಮತ್ತು ಕನ್ನಡ ಎರಡೂ ಭಾಷೆಯಲ್ಲಿ ಪಾಂಡಿತ್ಯ"ತ್ತು ಎರಡೂ ಭಾಷೆಯ ಪದಗಳನ್ನು ಬರೆದು ಮತ್ತೊಂದು ಹೊಸ ಪದ ಹುಟ್ಟುಹಾಕುತ್ತಿದ್ದರು,ಕನ್ನಡ ಪತ್ರಿಕೋದ್ಯಮದಲ್ಲಿ ಈ ರೀತಿಯ ಬರವಣಿಗೆಗೆ ಬಹುಶಃ ವೈಯೆನ್ಕೆಯವರೇ ಮೊದಲಿಗರು.
ಪಾಪ್‌ಗಾಯಕ ಮೈಕಲ್ ಜಾಕ್ಸನ್ ಕುರಿತು ತಮ್ಮ ಲೇಖನ ಒಂದರಲ್ಲಿ "ಗೆ ಹೇಳುತ್ತಾರೆ.
ಮೈಕೆಲ್ ಜಾಕ್ಸನ್
ಎಂಥ ಹಾಡು ಹಾಡುತಾನ
ಎಂಥ ಜಾದೂ ಮಾಡುತಾನಾ
ಮೈಕೇಲ್ ಜಾಕ್ಸನ್
ಮೈಕೈ ಎಲ್ಲ ಜಾಕಿಸೋಣ
ಮೈಕೈ ಎಲ್ಲ ತಾಕಿಸೋಣ
ಮೈಕೈ ಎಲ್ಲ ಜಾಡಿಸೋಣ.
(ಭಟ್, ೨೦೦೬, ಪುಟ, ೧೬೪.)
ಈ ಕ"ತೆಯ ಉದ್ದೇಶ ನೇರವಾಗಿ ಹಾಸ್ಯವೆನಿಸಿದರೂ ಅವುಗಳಿಗೆ ಹಲವು ಮಗ್ಗಲುಗಳ ಸತ್ಯವುಂಟು. ಅವರ ಆಯ್ಕೆ ಮಾಡಿಕೊಳ್ಳುತ್ತಿದ್ದ ರ್ಶೀಕೆ ಸ್ವತ: ಭಾಷೆಂದ "ಶೇಷತೆ ಕೂಡಿರುತ್ತಿತ್ತು. ಸಾ"ತ್ಯ ರಾಜಕೀಯ, ಅಂತರ್‍ಟಾಯ ಸಂಬಂಧದಂತ ಯಾವುದೇ "ಷಯವನ್ನು ತಮ್ಮ ಭಾಷೆಯ ಪರಿಧಿಗೆ ತಂದುಕೊಂಡು ಚರ್ಚಿಸುತ್ತಿದ್ದರು.
ಅವರ ಮತ್ತೊಂದು ಲೇಖನದಲ್ಲಿ ಕನ್ನಡ ಭಾಷೆಯಲ್ಲಿ ಆಂಗ್ಲ ಪದಗಳ ಬಳಕೆಯನ್ನು "ರೋಧಿಸುವವರ ಕುರಿತು ನಾ.ಕಸ್ತೂರಿಯವರ ಕವನವನ್ನು ಉದಾಹರಿಸುತ್ತಾರೆ.
ಕನ್ನಡ ಇಂಗ್ಲೀಷ್ ಕಿಂಚಿತ್ತು ಬೆರಸಲದು
ಸಿನ್ನುಗಳ ಲಿಸ್ಟಿನಲಿ ಹೈಯಸ್ಟು ಅದರಿಂದ
ಫನ್ನಿಗೂ "ಕ್ಸದಿರು-ಸರ್ವಜ್ಞ. (ಭಟ್, ೨೦೦೬)
ಇದೇ ಲೇಖನದಲ್ಲಿ ವೈಯನ್ಕೆ ಕನ್ನಡ ಭಾಷೆ ಒಂದೇ ಅಲ್ಲ, ಪ್ರಪಂಚದ ಇತರೆ ಬಾಷೆಯಲ್ಲಿ ಇಂಗ್ಲೀಷ್ ಪದಗಳು ಆ ಭಾಷೆಯ ಸತ್ವದಂತೆ ಆಗಿವೆ ಎಂದು ಹೇಳುತ್ತಾರೆ. ಜಪಾನೀಯರಿಗೆ 'ಲ' ಉಚ್ಚಾರಣೆ ಕಷ್ಟ ಎಂಬುದನ್ನು ಪ್ರಸ್ತಾಪಿಸುತ್ತಾರೆ.
ಅವರ ಮತ್ತೊಂದು ಲೇಖನ 'ಮದ್ವ-ಮಾಕ್ಸ್-ಎಕ್ಕುಂಡಿ ಗೋಪಾಲಕೃಷ್ಣ ಅಡಿಗರ ಮತ್ತು ಸು.ರಂ ಎಕ್ಕುಂಡಿಯವರ ಜೀವನ ದರ್ಶನ ಕುರಿತು ಹೇಳುತ್ತಾ "ಗೆ ಹೇಳುತ್ತಾರೆ.
ಸುಬ್ಬಣ್ಣ ರಂಗನಾಥ
'ಕನ್ನಡದ ಕೀಟ್ಸ್'
ಎಂದಾರೋ ಕರೆದದ್ದು ಕೇಳಿ
ಕುದಿದ್ದರು
ಲೋಕಲ್ ಎಲಿಯಟ್
ಅಂಡ್ ಏಟ್ಸ್.
(ಭಟ್,೨೦೦೬, ಪುಟ ೨೩೮).
ಅಂದರೆ ಈ ಕ"ತೆಯ ಆಶಯ ಅಡಿಗ, ಎಕ್ಕುಂಡಿ ಇಬ್ಬರೂ ಉಳಿದ ಪ್ರಸಿದ್ದ ಕ"ಗಳಂತೆ ಬರಿಯ ಕಾವ್ಯ ವ್ಯವಸಾಯದಲ್ಲಿ ನಿರತರಾಗದೆ, ಜೀವನದ ಅಂದಂದಿನ ಚಳುವಳಿ, "ಚಾರಗಳು, ಆಸಕ್ತಿ ತೋರಿ ಅವುಗಳಲ್ಲಿ ತಮ್ಮನ್ನು ತೊಡಗಿಸಿಕೊಂಡವರು. ಅದೇ ರೀತಿ ಸು.ರಂ.ಎಕ್ಕುಂಡಿ ಕನ್ನಡದ ಕೀಟ್ಸ್ ಎಂದಾಗ ಸಾ"ತ್ಯವಲಯದಲ್ಲಿ ಸಂಕುಚಿತಗೊಂಡವರ ಕುರಿತು ವೈಯೆನ್ಕೆ ಈ ಲೇಖನದಲ್ಲಿ "ಢಂಭನಾತ್ಮಕವಾಗಿ ಹೇಳಿದ್ದಾರೆ.
"ಂದೆ ವೃತ್ತಪತ್ರಿಕೆಗಳು ಆರಂಭವಾದಾಗ ಜಾ"ರಾತು ಹಾಕಿದ ನಂತರ ಸುದ್ದಿ ಹಾಕುತ್ತಿದ್ದರು, ವೃತ್ತ ಪತ್ರಿಕೆಯಲ್ಲಿ ಜಾ"ರಾತು ಅನಿವಾರ್‍ಯವೆಂಬಂತೆ ಹಾಕುತ್ತಿರುವುದನ್ನು ಪ್ರಸ್ತಾಪಿಸುತ್ತಾ 'ಆಡ್ ಮ್ಯಾಡ' ಎಂಬ ಲೇಖನದಲ್ಲಿ ಕವನವನ್ನು "ಗೆ ಪ್ರಸ್ತಾಪಿಸುತ್ತಾರೆ.
ಸುಂದರಿ ಜಾ"ರಾ
'ಥೂ'
ಎಂದರೆ
ಅದೇ
ಜಾ"ರಾ-ಥೂ.
(ಭಟ್.೨೦೦೬)
ವೈಯೆನ್ಕೆ ಹೆಚ್ಚಾಗಿ ಬರೆದಿರುವುದು "ಚಾರಭರಿತ ಹಾಸ್ಯ ಸಾ"ತ್ಯವನ್ನೇ ಅವರದು ಎಂತಹ ಹಾಸ್ಯ ಎಂದರೆ ಅಂತರ್‍ಟ್ರಾಯ ಮಟ್ಟ ಮುಟ್ಟುವ ಹಾಸ್ಯ!. "ನೋದ ಅಥವಾ ದ್ವಂದ್ವಾರ್ಥದಿಂದ ಕೂಡಿದ ರ್ಶೀಕೆ ಮತ್ತು ಪದ ಪ್ರಯೋಗಗಳಲ್ಲಿ ವೈಯೆನ್ಕೆ ಸಿದ್ದ ಹಸ್ತರು. ಕೇವಲ ದ್ವಂದ್ವಾರ್ಥದ ಪದಗಳನ್ನು ಸ್ಟೃಸುವುದರಲ್ಲಿಯೇ ಉತ್ತಮ ರ್ಶೀಕೆಗಳನ್ನು ಕೊಡುವುದರಲ್ಲಿ ಪ್ರಸಿದ್ದರು.
'ಪ್ರತಿ-ಪದಾ-ರ್ಥ' ಎಂಬ ಲೇಖನದ ರ್ಶೀಕೆ ಈ ಮಾತಿಗೆ ಉತ್ತಮ ನಿದರ್ಶನ. ಈ ಲೇಖನದಲ್ಲಿ ಭಾಷೆಯಲ್ಲಿನ ಪದಗಳ ಅರ್ಥ ಕುರಿತು ಹಲವು ಮಗ್ಗಲುಗಳನ್ನು ಚರ್ಚಿಸಿದ್ದಾರೆ. ವೈಯೆನ್ಕೆಯ ಹಾಸ್ಯ ಪ್ರಜ್ಞೆಯನ್ನು ಸೂಚಿತ ಈ ಲೇಖನವನ್ನು ನೋಡಬಹುದು.
ಅಪರಾಧಿಗಳಿಗೆ ಥರ್ಡ್ ಡಿಗ್ರಿ ಮತ್ತಿತರ ರೀತಿಯ ಶಿಕ್ಷೆ "ಧಿಸುವುದಕ್ಕೆ ಬದಲಾಗಿ "ಪ್ನಾಟಿಸಂ-ಸಮ್ಮೋಹಕ "ದ್ಯೆ ಬಳಸಿ ನಿಜ ಪತ್ತೆ ಹಚ್ಚುವ ಕ್ರಮ ಸೂಕ್ತವಲ್ಲವೆ? ಎಂದು ಮನಶಾಸ್ತ್ರಭಾಗದಲ್ಲಿ ಸೂಚಿಸಿದ್ದಾರೆ ಎಂದು ಉಲ್ಲೇಖಿಸುತ್ತಾ ತಮ್ಮ ಕವನದಲ್ಲಿ "ಗೆ ಹೇಳುತ್ತಾರೆ.
'ತಪ್ಪೊಪ್ಪಿಕೊಳ್ಳದವರ
ಬಾ, ಬೀಗ-
ಕೈ
ಕೀ
ಹಲವಾರು ಪೆಗ್
"ಸ್ಕಿ' ಎಂಬ ಸಾಲುಗಳನ್ನು ಉದ್ದರಿಸಿ 'ಬಾ ಬಿಡದವರಾರು ಗುಂಡಿಗೆ? ಕೈ ಕೊಡದವರಾರು ಫ್ರೆಂಡಿಗೆ? ಮೇಲಿನ ಕವನದಲ್ಲಿ "ಡಂಭನಾತ್ಮಕ ಹಾಸ್ಯ ಎದ್ದು ಕಾಣುತ್ತದೆ. (ಭಟ್,೨೦೦೬).
ಬದುಕಿನ ಬಗೆಗೆ ಅದಮ್ಯ ಚೇತನ ಇಟ್ಟುಕೊಂಡಿದ ವೈಯೆನ್ಕೆ, ಬರವಣಿಗೆಯ "ಚಾರದಲ್ಲಿ ಬಹಳ ಗಂಭೀರವಾದ ನುಡಿಗಳನ್ನಾಡುತ್ತಿದ್ದರು. (ಸುಂದರ, ೨೦೦೬) ಯಾವುದೇ ಒಂದು ಲೇಖನದ ಜನಪ್ರಿಯತೆಗೆ ಅದರ ಭಾಷೆ ಮತ್ತು ನಿರೂಪಣೆಯ ಶೈಲಿ, ಚರ್ಚಿಸುವ "ಷಯ ಮುಖ್ಯವಾಗುತ್ತದೆ. ಜೊತೆ ಬರಹಗಳು ಸಹೃದುಗರನ್ನು ಒಂದು ಕ್ಷಣ ಚಿಂತನೆಗೆ ತೊಡಗುವಂತೆ ಮಾಡಬೇಕು. ಇವು ವೈಯೆನ್ಕೆಯವರ ಬರಹದಲ್ಲಿ ಪ್ರಮುಖವಾಗಿ ಇದ್ದು ಕಾಣುತ್ತವೆ.
ವೈಯೆನ್ಕೆಯವರ ಪ್ರತಿ ಲೇಖನವೂ ಯಾವುದೋ ಮೂಲೆಯ ಪ್ರಸಂಗದಿಂದ ಪ್ರಾರಂಭವಾಗಿ, ಭಾಷೆಯೋಂದಿಗೆ ನಾಟ್ಯವಾಡುತ್ತ ಅಂತರ್‍ಟ್ರಾಯ ಮಟ್ಟದಿಂದ "ಚಾರವನ್ನು ಸರಳವಾಗಿ ಚರ್ಚಿಸುತ್ತಿದ್ದರು. ಓದುಗರ "ಚಾರ ಮಂಥನಕ್ಕೆ ಯಾವುದೇ ಭಂಗ ಉಂಟು ಮಾಡುತ್ತಿರಲಿಲ್ಲ. ಈ ಕಾರಣವಾಗಿಯೇ ವಂಡರ್‌ಕಣ್ಣು ಜನಪ್ರಿಯವಾಗಿತ್ತು.
'ಭಾರತದ ರಾಯಭಾರಿ' ಎಂಬ ಲೇಖನದಲ್ಲಿ ಪ್ರಸಂಗ ಒಂದು "ಗಿದೆ.
ಟರ್ಕಿಯ ಆಧ್ಯಕ್ಷರ ಹೆಂಡತಿ ಗರ್ಬಚೋವ್‌ರ ಪತ್ನಿ ರೈಸಾಳನ್ನು ಭೇಟಿ ಮಾಡಿದಾಗ ಹೇಳಿದಳಂತೆ. "ನನ್ನ ಗಂಡ ನನ್ನ ಹುಟ್ಟು ಹಬ್ಬಕ್ಕೆ ಅಪೂರ್ವವಾದ ಕಾರ್ ಕೊಟ್ಟ'
ರೈಸಾ ಹೇಳಿದಳು, ನಾನಗಿದ್ದರೆ ಒಂದು ಪಿಕಸೋ ಬೇಕೆಂದು ಕೇಳುತ್ತಿದ್ದೆ.
ಟರ್ಕಿ ಅಧ್ಯಕ್ಷರ ಪತ್ನಿ: ಹೌದಾ? ಪಿಕಾಸೋಗೆ ಎಷ್ಟು ಬಾಗಿಲು?
'ಪಿಕಾಸೋ' ಕಾರಲ್ಲ ಮಹಾನ್ ಕಲಾ"ದ ಪಿಕಾಸೋ ರಚಿಸಿದ ಚಿತ್ರ ಎಂದು
ಆಕೆಗೆ ಗೊತ್ತಿರಲಿಲ್ಲ.
ಈ ಒಂದು ಲೇಖನ ಭಾರತದ ಅಂಬಾಸಿಡರ್ ಕಾರ್‌ನ "ಚಾರದಿಂದ ಪ್ರಾರಂಭವಾಗಿ, ಅಂತರ್‍ಟ್ರಾಯಾ "ಚಾರವನ್ನು ಸಂದರ್ಭ ಎನ್ನುವಂತೆ ಚರ್ಚಿಸುವುದು ಸೊಜಿಗ ಹುಟ್ಟಿಸುತ್ತದೆ.
ವೈಯೆನ್ಕೆ ಬರವಣಿಗೆಯಲ್ಲಿ ಎದ್ದು ಕಾಣುವುದು ಅವರ ಅನನ್ಯ ದ್ಟೃ. ಅದನ್ನು ಸದಾ ತೆರೆದಿಟ್ಟುಕೊಳ್ಳುವ ಜಾಗೃತ ಮನಸ್ಸು ಹಾಗೂ "ಷಯಗಳ ಬಗೆಗಿರುವ ತೀವ್ರ ಕುತೂಹಲ, ಸಹಜವಾಗಿಯೇ ಈ ಕುತೂಹಲ ಓದುಗನ ಕುತೂಹಲವಾಗುತ್ತಿದ್ದ ರೀತಿ; "ಗಾಗಿ ಅವರ ಲೇಖನ ಎಂದಿಗೂ ಸೋಲಲಿಲ್ಲ. ಅಂಕಣ ಬರಹಕ್ಕಿರುವ ಏಕತಾನತೆ, ಸಂಕುಚಿತತೆ, "ಷಯ ಪ್ರಸ್ತಾಪದ ಕಿರು ವ್ಯಾಪ್ತಿ ಇವುಗಳಿಗೆ ಇರಲಿಲ್ಲ. ಅವರು ಯಾವುದೇ ಒಂದು "ಷಯವನ್ನು 'ರೂಪಕದ ಮಾದರಿ'ಯಲ್ಲಿ ಚರ್ಚಿಸುತ್ತಿದುದ್ದು "ಶೇಷ.