ವಿವಾದದ ಅಮಲು
30/04/2012 19:46
ಚಾಣುಕ್ಯ. ಎಂ
ರೊಟ್ಟಿ ಉಂಬುತ್ತಾ ಉಪ್ಪಿನ ಕಾಯಿ ಚಪ್ಪರಿಸುತ್ತಿದ್ದಾಗ ಮಾತಿಗೆ ಕುಳಿತವರು ಈ ಚಿತ್ರಕ್ಕೂ ಅದೇ ರೀತಿ ವಿವಾದದ ರೂಪ ಕೊಡ್ರಿ ಎಂದು ನಿರ್ದೇಶಕ ಹ.ಮಾ ಶಿವಲಿಂಗಯ್ಯ ಅಲಿಯಾಸ್ ಹಂಶಿ ಅವರಿಗೆ ಸಲಹೆ ಕೊಟ್ಟು ನಕ್ಕರು.
ವಿವಾದಗಳ ಹಣೆಪಟ್ಟಿ ಕಟ್ಟಿಕೊಂಡೇ ಯಶ ಗಳಿಸಿದ ಭೀಮಾತೀರದಲ್ಲಿ ಚಿತ್ರ ಋಣಾತ್ಮಕ ಪ್ರಚಾರದಿಂದಲೇ ಪ್ರೇಕ್ಷಕನಿಗೆ ಹತ್ತಿರವಾಯಿತು. ಒಬ್ಬ ಚಂದಪ್ಪ, ಒಬ್ಬ ಡೆಡ್ಲಿ ಸೋಮ ಹೀಗೆ ನೂರಾರು ರೌಡಿಗಳ ಜೀವನ ಪ್ರೇರಿತ ಚಿತ್ರಗಳು ಇಂದು ಜನ ಸಾಮಾನ್ಯರ ಮೇಲೆ ಬೀರುವ ಪರಿಣಾಮ ಊಹಿಸಲೂ ಅಸಾಧ್ಯ. ಹೀಗೆ ಹರಟುತ್ತಾ ಮಾತಿಗೆ ಶುರುವಿಟ್ಟವರು ಪ್ರತಿಭಾವಂತ ನಟ ಸುಚೇಂದ್ರ ಪ್ರಸಾದ್.
ಭೀಮಾ ತೀರದಲ್ಲಿ ಚಿತ್ರದಲ್ಲಿನ ಇವರ ಕಳನಟನ ಪಾತ್ರ ಸುಚೇಂದ್ರರ ಹೀರೋ ಇಮೇಜ್‌ಗೂ ಭಾಷ್ಯ ಬರೆದಿದೆ. ಚಿತ್ರದುರ್ಗದಲ್ಲಿ ಚಿತ್ರೀಕರಣವಾಗುತ್ತಿರುವ ವ್ಯವಸ್ಥೆಗಳು ಚಿತ್ರದ ಮೂಲಕ
ಸುಚೇಂದ್ರ ಹೀರೋ ಆಗಿ ಅಧಿಕೃತ ಎಂಟ್ರಿ ಕೊಡಲಿದ್ದಾರೆ.

ರೊಟ್ಟಿ ಉಂಬುತ್ತಾ ಉಪ್ಪಿನ ಕಾಯಿ ಚಪ್ಪರಿಸುತ್ತಿದ್ದಾಗ ಮಾತಿಗೆ ಕುಳಿತವರು ಈ ಚಿತ್ರಕ್ಕೂ ಅದೇ ರೀತಿ ವಿವಾದದ ರೂಪ ಕೊಡ್ರಿ ಎಂದು ನಿರ್ದೇಶಕ ಹ.ಮಾ ಶಿವಲಿಂಗಯ್ಯ ಅಲಿಯಾಸ್ ಹಂಶಿ ಅವರಿಗೆ ಸಲಹೆ ಕೊಟ್ಟು ನಕ್ಕರು.
ಹಂಶಿ ಹಾಸ್ಯವಾಗಿಯೇ ಸ್ವೀಕರಿಸಿ ಮತ್ತೊಮ್ಮೆ ವಾರೆಕಣ್ಣಲ್ಲಿ ಸಿಗ್ನಲ್ ಕೊಟ್ಟರು.
ಸುಚೇಂದ್ರ ಯಾಕೋ ತುಂಬ ಹತಾಶರಾಗಿದ್ದರು. ಇಪ್ಪತ್ತು ವರ್ಷಗಳಾಯ್ತು ಸಿನಿಮಾ, ನಾಟಕ ಎರಡೂ ರಂಗದಲ್ಲು ನನ್ನ ಅಭಿನಯ ಪ್ರೇಕ್ಷಕರಿಗೆ ಇಷ್ಟವಾಯಿತು. ಭೀಮಾತೀರದಲ್ಲಿ ಚಿತ್ರ ವಿವಾದವಾದ ನಂತರ ಮಾಧ್ಯಮದವರು ಎಲ್ಲಿ ಕಂಡರಲ್ಲಿ ಮಾತಾಡಿಸುತ್ತಾರೆ. ಜನ ಕೂಡ ಏನು ಕಡಿಮೆಯಿಲ್ಲ. ಪರಿಚಯ ಮಾಡಿಕೊಳ್ಳುವ ಮೊದಲು ಸರ್ ಈ ಕಾಂಟ್ರವರ್ಸಿ ಉದ್ದೇಶ ಪೂರ್ವಕವಾ ಎಂದು ಪ್ರಶ್ನಿಸುತ್ತಾರಂತೆ. ನೆಗೆಟಿವ್ ಸೆನ್ಸ್ ಕೂಡ ಒಂದೊಂದು ಸಾರಿ ವರ್ಕ್‌ಔಟ್ ಆಗುತ್ತದಲ್ಲ ಎಂದೇ ದುಃಖಿತರಾದರು.

ನಂತರ ಅವರ ಮಾತು ಮಾಧ್ಯಮಗಳ ವಿರುದ್ಧ ಹರಿಯಿತು. ಯಾರದೋ ಖಾಸಗಿ ಸೇಡಿಗಾಗಿ ಭೀಮಾತೀರದಲ್ಲಿ ಚಿತ್ರ ಅಸ್ತ್ರವಾಯಿತು. ಬೀದಿ ಜಗಳ ಸರ್, ಒಂದುಕಡೆ ಕುಳಿತು ಮಾತು ಕತೆಯಾಡಿದ್ದರೆ ಬಗೆ ಹರಿಯುವ ಸಮಸ್ಯೆ ಅದು. ಇಷ್ಟೆಲ್ಲಾ ರಂಪ ರಾಮಾಯಣ ಮಾಡಿದರೆ ಜನ ನಮ್ಮನ್ನ ಕೇಳ್ದೆ ಪಾಪ ಇನ್ಯಾರನ್ನು ಕೇಳಿಯಾರು?
ಎಲ್ಲಾ ಸುದ್ದಿ ವಾಹಿನಿಗಳ ಅಡಿ ಪಟ್ಟಿ ನೋಡಿ. ಸುವರ್ಣ ನ್ಯೂಸ್ ನೇರ, ದಿಟ್ಟ, ನಿರಂತರ. ಅಂದರೆ ಉಳಿದ ಚಾನೆಲ್‌ಗಳ ಸುದ್ದಿ ನೇರವಾಗಿಲ್ಲವೇ? ನೈಜ್ಯ ಸುದ್ದಿಗಾಗಿ ಸಮಯ ನ್ಯೂಸ್, ಹಾಗಾದರೆ ಉಳಿದ ವಾಹಿನಿಗಳು ಸುಳ್ಳು ಸುದ್ದಿ ಪ್ರಸಾರ ಮಾಡುತ್ತಾರ. ಪಬ್ಲಿಕ್ ಟಿವಿ, ಇದು ನಿಮ್ಮ ಸೊತ್ತು. ಅಂದ ಮಾತ್ರಕ್ಕೆ ಜನಗಳ ಹೆಸರಿಗೆ ಚಾನಲ್ ರಿಜಿಸ್ಟರ್ ಮಾಡುತ್ತಾರ? ಇದು ಅವರ ಪ್ರಶ್ನೆ.
ವಿವಾದ ಎನ್ನುವುದು ಬಯಸಿ ಬಯಸಿ ಬರುವಂತಹದ್ದಲ್ಲ. ಅಕಸ್ಮಾತಾಗಿ ಹುಟ್ಟಿಕೊಳ್ಳುತ್ತದೆ. ವೈಯಕ್ತಿಕ ಹಿತಾಸಕ್ತಿಗಾಗಿ ಇದನ್ನೊಂದು ಅಸ್ತ್ರ ಮಾಡಿಕೊಳ್ಳುವುದರಲ್ಲಿ ಅರ್ಥವಿದೆಯೇ?
ಮೊದಲೇ ಚಿತ್ರರಂಗದಲ್ಲಿ ಇಲ್ಲದ ಸಮಸ್ಯೆಗಳು ಹುಟ್ಟಿಕೊಳ್ಳುತ್ತಿದೆ. ಆರ್ಥಿಕ ಪ್ರಗತಿಯೂ ಅಷ್ಟಕ್ಕಷ್ಟೆ. ಲಾಭ ಇಲ್ಲದ ಈ ಉದ್ಯಮದಲ್ಲಿ ಒಳಜಗಳಗಳು ಸರ್ವೇ ಸಾಮಾನ್ಯ ಅದಕ್ಕೊಂದು ವೇದಿಕೆ ಕಲ್ಪಿಸಿ ಒಂದು ಗಂಟೆ ಚರ್ಚೆ ಮಾಡುವುದು ನ್ಯಾಯ ಸಮ್ಮತವಲ್ಲ. ಎಂದು ತಲೆ ಮೇಲೆ ಕೈ ಹೊತ್ತು ಕುಳಿತರು.
ವಿವಾದದ ವಿಷಯ ಬಿಡಿ ಸರ್ ಎನ್ನುತ್ತಲೆ ಅವರ ಹೊಸ ಸಿನಿಮಾ ಬಗ್ಗೆ ಚಿತ್ತ ಹರಿಸಿದರು. ಹಂಶಿಯವರಿಗೆ ಇದು ಮೂರನೇ ಚಿತ್ರ. ದಡ ಸೇರಿದ ದೋಣಿ, ಅಮೃತ ಬಿಂದು ಚಿತ್ರ ವಿಫವಾದ ನಂತರವೂ ಹತಾಶರಾಗದೆ ಮತ್ತೊಂದು ಸಿನಿಮಾಗೆ ಮಾಡಲು ಯೊಚಿಸಿದರಂತೆ. ಹೀರೋ ಪಾತ್ರಕ್ಕೆ ಅವರಿಗೆ ಚಕ್ಕನೆ ಹೊಳೆದದ್ದು ಸುಚೇಂದ್ರರ ಹೆಸರು. ಚಿಕ್ಕಮಗಳೂರಿನಲ್ಲಿ ವಾಸ್ತವ್ಯ ಹೂಡಿದ್ದ ಅವರನ್ನು ಕಷ್ಟಪಟ್ಟು ಹುಡುಕಿ ಭೇಟಿಯಾದ್ರಂತೆ. ಅಲ್ಲ ಸರ್ ಕೂದಲೇ ಇಲ್ಲ. ಇನ್ನು ಹೀರೋ ಮಾತೆಲ್ಲಿ ಅಂತಲೇ ಹಂಶಿಯವರನ್ನು ಛೇಡಿಸಿದಾಗ. ಸರಿ ಸರ್ ಕೂದಲಿಲ್ಲದಿದ್ದರೇನಂತೆ ಬನ್ನಿ ವಿಗ್ ಹಾಕಿಕೊಂಡೇ ಅಭಿನಯಿಸಿ ಎಂದು ಬೆನ್ನು ತಟ್ಟಿದರಂತೆ.
೬೦ ಲಕ್ಷ ಬಜೆಟ್‌ನಲ್ಲಿ ಚಿತ್ರ ರೆಡಿಯಾಗ್ತಿದೆ. ನಾಯಕಿ ಹಿಮ ಶ್ವೇತಾ ಅವರಿಗೆ ಇದು ಚೊಚ್ಚಲ ಚಿತ್ರ. ಚಿತ್ರದುರ್ಗದಲ್ಲಿ ಇನ್ನು ಹದಿನೈದು ದಿನ ಚಿತ್ರೀಕರಣ ನಡೆಯಲಿದೆಯಂತೆ. ಶಿವಮೊಗ್ಗ, ಸಾಗರ, ಮೈಸೂರಿನಲ್ಲಿ ಚಿತ್ರದ ಉಳಿದರ್ಧ ಭಾಗ ಚಿತ್ರೀಕರಣವಾಗಲಿದೆ. ಇನ್ನು ಮೂರು ತಿಂಗಳಲ್ಲಿ ಚಿತ್ರ ತೆರೆ ಕಾಣಲಿದೆ.
==============================