ಮಾನವತವಾದ ಚಿಂತನೆ:ರಾಮಮನೋಹರ ಲೋಹಿಯಾ
ರಾಮಮನೋಹರ ಲೋಹಿಯಾ (೧೯೧೦-೧೯೬೭)
ಡಾ. ರಾಮಮೋನಹರ ಲೋಹಿಯಾ ಸಮಾಜವಾದಿ ಎನ್ನುವುದಕಿಂತ ಮೊದಲು ಮಾಹನ್ ಮಾನವತವಾದಿ.ಅವರ ವಿಚಾರಧಾರೆಯ ಮೇಲೆ ಗಾಂಧೀಜಿವರ ಚಿಂತನೆಗಳ ಗಾಢವಾದ ಪ್ರಭಾವವಿತ್ತು. ಅವರು ಗಾಂಧಿಯರ ಅಪ್ಪಟ ಶಿಷ್ಯ .ಆದರೂ ಇಬ್ಬರ ವಿಚಾರಧಾರೆಯಲ್ಲಿ ಕೆಲವು ಭಿನ್ನತೆಗಳಿದ್ದವು. ಇನ್ನು ಅವರ ಮಾನವತವಾದದ ವಿಚಾರಕ್ಕೆ ಬಂದರೆ, ಲೋಹಿಯಾ ಅಂಬೇಡ್ಕರ್ ರಂತೆ ಸಮಾಜದ ತೀರ ಕೆಳ ಹಂತದದ ಹಿನ್ನಲೆಯಿಂದ ಬಂದಿರದ್ದಿರೂ ಈ ದೇಶದ ಶೋಶಿತನ ನೋವನ್ನು ಅರಿತ್ತಿದ್ದರು. ಭಾರತದಲ್ಲಿನ ಜಾತಿ ವ್ಯವಸ್ಥೆಯನ್ನು ಕಟುವಾಗಿ ಟೀಕಿಸಿದರು.ಅವರು ವಿದ್ಯಾರ್ಥಿ ಜೀವನದೊಂದಿಗೆ ರಾಜಕೀಯ ಜೀವನವನ್ನು ಪ್ರವೇಶಿಸಿದವರು.ಸುತ್ತಲೂ ನೆಡೆಯುತ್ತಿರುವ ಅಮಾನವೀಯ,ಕ್ರೂರ ಘಟನೆಗಳನ್ನು ಪ್ರತಿಭಟಿಸಿದರು.ಬಂಡವಾಳಶಾಹಿ, ಊಳಿಗಮಾನ್ಯ ಪದ್ದತಿಯನ್ನು ತೀವ್ರವಾಗಿ ವೀರೋಧಿಸಿದರು.
ಕುಲವನೊಳ್ಪಡೆ ಹುರುಳಿಲ್ಲ
ಅವರ ನಡೆ ನೊಳ್ಪಡೆ ನಡೆಯವರು ತ್ರೀಲೋಕದಲ್ಲಿ
ಇದು ಕಾರಣ ಇತಿಹಾಸ ಪುಟದಲಿ ಘಟ್ಟಿಕಾಳಾಗಿ ಉಳಿದ್ವರೆಲ್ಲಾ
ಅಂತ್ಯಜರೆ,ಸಪ್ತ ಋಷಿಗಳು ಕಾವ್ಯ ರಚನಕಾರರೆಲ್ಲಾ ಶೂದ್ರರೆ ಎಂಬ ಬಸವಣ್ಣ ನವರ ವಚನದಂತೆ ಮನುಷ್ಯ ಜಾತಿ ಶ್ರೇಷ್ಟನಾಗುದಿಲ್ಲ ಬದಲಿಗೆ ನೈತಿಕ ಬದುಕಿನಿಂದ ಶ್ರೇಷ್ಟನಾಗುತ್ತಾನೆ ಎಂಬ ಆಶಯ ಲೋಹಿಯವರ ಚಿಂತನೆಯ ಮೂಲವಾಗಿತ್ತು.ಅವರ ’ಬ್ಯುಟಿ ಅಂಡ್ ಸ್ಕಿನ್ ಕಲರ್’ ಎಂಬ ಪ್ರಬಂಧವೊಂದರಲ್ಲಿ
ಅನಾದಿ ಕಾಲದಿಂದಲೂ ಈ ಹುನ್ನಾರದಿಂದ ಜರ್ಜರಿತವಾದ ಸಮಾಜದಲ್ಲಿ ನೆಮ್ಮದಿ ಉಸಿರಾಡುವಂತಾಗಬೇಕು ಎಂದು ಲೋಹಿಯಾ ಕನಸು ಕಂಡಿದ್ದರು. ಮಾನವ ಪ್ರೇಮಿಯಾಗಿ ಬಾಳಿ ಬದುಕಿ ಹೋದ ಲೋಹಿಯಾ ಅನನ್ಯ ಜೀವಿ ಇಂತಹ ಲೋಹಿಯಾ ೨೩-೦೩-೧೯೧೦ ರಲ್ಲಿ ಉತ್ತರ ಪ್ರದೇಶದ ಪ್ಯಜಾಬಾದ್ ಜಿಲ್ಲೆಯ ಅಕ್ಬರ್ಬ್ ಪುರದಲ್ಲಿ ಜನಿಸಿದರು.ತಾಯಿ ಚಂದ್ರಿ ತಂದೆ ಹೀರೆಲಾಲ್. ಬಾಲ್ಯದಲ್ಲಿಯೇ ಲೋಹಿಯಾ ತಾಯಿಯನ್ನು ಕಳೆದುಕೊಂಡರು. ತಂದೆಯೊಡನೆ ಅಸಹಕಾರ ಚಲುವಳಿಯಲ್ಲಿ ಭಾಗವಹಿಸುವ ಮೂಲಕ ಗಾಂಧಿಜೀಯವರ ಪರಿಚಯವಾಗಿ ಅವರ ಗಾಢವಾದ ಪ್ರಭಾವಕ್ಕೆ ಒಳಗಾದರು.ಲೋಹಿಯಾ ಸದಾ ಶೋಶಿತ ವರ್ಗದವರ ಒಳಿತಿಗಾಗಿಗೆ ಹಂಬಲಿಸುತ್ತಿದ್ದರು.ಅವರ ಸಮಾಜವಾದಿ ಚಿಂತನೆ ಎಲ್ಲಾ ವಾದಗಳಿಗಿಂತ ಭಿನ್ನವಾದವಾಗಿತ್ತು.ಲೋಹಿಯಾ ತಮ್ಮ ೨೨ ನೇ ವಯಸ್ಸಿನಲ್ಲಿ ಜರ್ಮನಿಯ ಬರ್ಲಿನ್ ವಿಶ್ವವಿದ್ಯಾಲಯದಲ್ಲಿ ಡಾಕ್ಟರೇಟ್ ಪದವಿ ಅಜ್ಞಾನ, ಅಂಧಕಾರ,ಜಾತಿ ಮೇಲು-ಕೀಳು ಸಮಸ್ಯೆಯಿಂದ ಕೂಡಿರುವ ಭಾರತದಲ್ಲಿ ಭೌಧಿಕತೆಯ ಕೊರತೆ ಸದಾ ಇರುವಂತದ್ದು; ಆಗಾಗ ಭೌಧಿಕತೆಯ ಕೊರತೆಯನ್ನು ತುಂಬಲು ಜ್ಞಾನಿಗಳು ಉದಯಿಸುತ್ತಾರೆ. ಅವರ ದುಡಿಮೆ ಭಾರತೀಯ ಸಮಾಜಕ್ಕೆ ಅಷ್ಟೇ ಅವಶ್ಯಕವಾಗಿರುತ್ತದ. ಅದನ್ನು ಅರಿತುಕೊಂಡಿದ್ದ ಲೋಹಿಯಾ ತಮ್ಮ ಕಾಲ ಸಂದರ್ಭದಲ್ಲಿ ದೇಶದಲ್ಲಿ ಆವರಿಸಿದಭೌಧಿಕ ಕುಸಿತವತನ್ನು ಗುರುತಿಸಿದ್ದರು.ಅದನ್ನು ಹೋಗಲಾಡಿಸಲು ಯತ್ನಿಸಿದರು.ಅವರ ಜೀವಿತದ ಕೊನೆಯವರೆಗೂ ಮಾನವೀತೆಯ ಬಗೆಗೆ, ಸಮಾಜದ ಸನ್ಮಾರ್ಗದ ಬಗೆಗೆ ಚಿಂತಿಸಿದರು.
ವಿದ್ಯಾಭ್ಯಾಸ ಮಾಡುವಾಗ ಆ ಕಾಲದ ಎಲ್ಲಾ ಕ್ರೀಯಾಶಾಲಿಗಳನ್ನು ಸೆಳೆದಿದ್ದ ಕಾರ್ಲ್ ಮಾರ್ಕ್ಸ್ ವಾದವು ಲೋಹಿಯಾರನ್ನು ಸೆಳೆದದ್ದು ಸಹಜವಾಗಿತ್ತು.ಮುಂದೊಮ್ಮೆ ತಾವೇ ಸಮಾಜಿವಾದಿ ಆಂದೋಲನವನ್ನು ರೂಪಿಸಲು ಯತ್ನಿಸಿದಾಗ ಮಾರ್ಕ್ಸ್ ವಾದವನ್ನು ಆಳವಾಗಿ ಪರಿಶೀಲಿಸಿದರು .ಆ ಸಮಯಕ್ಕೆ ಗಾಂಧೀಜಿ ಅವರ ಚಿಂತನೆ ಲೋಹಿಯಾ ಅವರ ಪ್ರಜ್ನೆಯ ಭಾಗವಾಗಿತ್ತು. ’ನಾನು ಮಾರ್ಕ್ಸ್ ಪರವೂ ಅಲ್ಲ ವಿರೋಧವೂ ಅಲ್ಲ ಎಂದೊಮ್ಮೆ ಹೇಳಿದ ಲೋಹಿಯಾ ಗಾಂಧೀ ವಾದದ ಬಗ್ಗೆ ಇದೇ ನಿಲುವನ್ನು ತಳೆಯಲೆತ್ನಿಸಿದರು.ಆ ಮೂಲಕ ಲೋಹಿಯಾ ಅವರ ಸಮಾಜವಾದದ ಚಿಂತನೆ ಒಂದು ಸ್ಪಷ್ಟ ರೂಪ ಪಡೆದುಕೊಂಡಿತು.
ಲೋಹಿಯಾ ಅವರ ಚಿಂತನೆ ಈ ರೀತಿಯಾಗಿದೆ. ಕಪ್ಪು ಅಥಾವ ಬಿಳಿಯ ಬಣ್ಣಗಳಲ್ಲಿ ಯಾವುದು ಶ್ರೇಸ್ಟ ಎಂಬ ಚಚ್ರೇಯಲ್ಲಿ ಯಾವುದೇ ಸೌದರ್ಯ ಬಣ್ಣದಲ್ಲಿ ಅಡಕವಾಗಿರುವುದಿಲ್ಲ ಅದು ನೋಡುವವರ ದೃಷ್ಟಿಯನ್ನು ಆಧಾರಿಸಿರುತ್ತದೆ. ಮುಂದುವರೆದು ಭಾರತೀಯರು ನೀಲಿ ಬಣ್ಣದ ಕ್ರಸ್ಣನನ್ನು ಪೂಜಿಸುತ್ತಾರೆ.ಆದರೆ ಕಪ್ಪು ಬಣ್ಣ ಕೀಳು ಎಂದು ಭಾವಿಸುತ್ತಾರೆ.ಹೀಗೆ ಇಡೀ ಪ್ರಬಂಧದಲ್ಲಿ ವರ್ಣ ವ್ಯವಸ್ಥೆಯಲ್ಲಿನ ಕಟ್ಟುಪಾಡುಗಳ ವಿಶ್ಲೇಶಣೆ ಸರಾಗವಾಗಿ ನಡೆಯುತ್ತದೆ.